ಶಿವ ಶಂಭೋ
ದೇವರೆ ನೀನು ಶಂಕರ
ಆದರೂ ನೀ ನನ್ನ ಮಿತ್ರನೆ
ಲೋಕವ ಕಾಯಲು ವಿಷವ ಕುಡಿದ
ನೀಲಕಂಠನು ನೀನಯ್ಯಾ...
ನನ್ನ ಕಾಯುವ ಓ ಶಂಭೋ ಶಂಕರನೇ...
ಕರೆದರೆ ಬರುವ ಕರುಣಾಮಯಿ ಯೇ
ಏನೂ ಕೇಳದ ವೈರಾಗಿಯೆ....
ಆಡಂಬರ ಅಲಂಕಾರ ನಿನಗಿಲ್ಲ
ಕೇವಲ ಭಸ್ಮವೆ ನಿನ್ನ ಪ್ರಿಯವು.
ನಂದಿಯೇ ನಿನ್ನ ವಾಹನವು
ಸರ್ಪವೇ ನಿನ್ನ ಕೊರಳ ಮಾಲೆಯು....
ಮುಕ್ತಿಯ ಮಾರ್ಗವೇ ನಿನ್ನದಯ್ಯ
ಭಕ್ತಿಯ ಮಾಡುವೆ ಬಾರಯ್ಯ...
ಶಂಭೋ ಶಂಕರ ಮಹಾದೇವ
ನಿನ್ನಾ ಭಜನೆಯ ಮಾಡುವೆ ಬಾರಯ್ಯ...
ಕಷ್ಟವ ನೀಗುವ ಓ ರುದ್ರ
ಕೋಪವು ಬಂದರೆ ಪ್ರಳಯವೇ ಹೇ ಭದ್ರಾ.....
ತ್ಯಾಗದ ರೂಪ ನೀನಯ್ಯ
ದೇವರ ದೇವ ಮಹಾದೇವ.
ಶಂಭೋ ಶಂಕರ ಮಹಾದೇವ
ಭಜಿಸುವೆ ನಿನ್ನಾ ಬಾರಯ್ಯ...
- Adesh Shetty
19 Sep 2024, 04:49 pm
Download App from Playstore: