ಗೆಳತಿ ಕೊನೆಯಿರದ ಕನಸಿದು..ನನ್ನ ಪ್ರೀತಿ...
ಕಳೆದ ಕ್ಷಣಗಳ ಮರಳಿ ಬಯಸಿದೆ
ಹೃದಯ..ಅದರ ತಪ್ಪೇನಿಲ್ಲ
ಜೊತೆಯಿರುವ ಕನಸ ಕಂಡ ಮನವು
ಈಗೇಕೊ ಸುಮ್ಮನಾಗಿದೆ..ಅದರ ತಪ್ಪೇನಿಲ್ಲ
ಕಾಣದಿದ್ದರೂ ಮತ್ತೆ ಮತ್ತೆ ನೋಡುವ
ಬಯಕೆ ಕಂಗಳಿಗೆ..ಅದರ ತಪ್ಪೇನಿಲ್ಲ
ಹುಡುಕಿ ಹುಡುಕಿ ನೆಪಗಳ ಕರೆದಿದೆ ನೆನಪು
ಹತ್ತಿರ ಬರಲು..ಅದರ ತಪ್ಪೇನಿಲ್ಲ
ಗೆಳತಿ ನಿನ್ನ ನಗುವ ಸದ್ದು ಗುನುಗಿದೆ
ಎದೆಯಲಿ..ನಂಗೇನೂ ಗೊತ್ತಿಲ್ಲ..!!
ಎಮ್.ಎಸ್.ಭೋವಿ...✍️
- mani_s_bhovi
11 Sep 2024, 10:28 pm
Download App from Playstore: