ಶಿಕ್ಷಕರ ದಿನಾಚರಣೆ
ಕಾಗುಣಿತ ತಪ್ಪಾಯ್ತು ಅಂತ ನೂರುಸಾರಿ ಅದನ್ನೇ ಬರೆಸಿ ಅಕ್ಷರ ದುಂಡಾಗುವಂತೆ ಮಾಡಿದ ಕನ್ನಡ ಮೇಷ್ಟಿಗೆ..?❤️
ಹೊಟ್ಟೆಪಾಡಿಗೆ ಇಂಗ್ಲಿಷ್ ಇದ್ದರೂ ಮಾತೃಭಾಷೆ ಮುಖ್ಯ ಎಂದು ಹೇಳಿಕೊಟ್ಟ English ಮೇಷ್ಟಿಗೆ....?
ಕಳೆದದ್ದಕ್ಕೆ ಕೊರಗಬೇಡ ಗಳಿಸುವಾಗ ಮೆರೆಯಬೇಡ ಎಂದು ಹಿತವಚನ ಹೇಳಿದ ಗಣಿತ ಮೇಷ್ಟಿಗೆ..➕➖
ಇತಿಹಾಸ ಮರೆತವನು.. ಇತಿಹಾಸ ಸೃಷ್ಟಿಸಲಾರ ಕಣಯ್ಯಾ ಎಂದು ತಿಳುವಳಿಕೆ ನೀಡಿದ Social ಮೇಷ್ಟಿಗೆ?
ಮೇಲೇರಿದ್ದು ಕೆಳಗೆ ಇಳಿಯಲೇ ಬೇಕು. ಇದು ಗುರುತ್ವಾಕರ್ಷಣೆ ಮಾತ್ರವಲ್ಲ. ಜೀವನದ ನಿಯಮ ಎಂದು ಹೇಳಿದ science ಮೇಷ್ಟಿಗೆ...???️
ತಪ್ಪು ಮಾಡಿದಾಗ ಬಸ್ಕಿ ಹೊಡೆಸಿ ದೇಹ ಗಟ್ಟಿ ಮಾಡಿದ ಪಿಟಿ ಮೇಷ್ಟಿಗೆ .... ??
ಜೀವನದ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯ ಪಾಠವನ್ನು ಹೇಳಿಕೊಡುತ್ತಿರುವ ಎಲ್ಲಾ ಗುರುಗಳಿಗೆ..?❤️
ಶಿಕ್ಷಕರ ದಿನಾಚರಣೆಯ ಶುಭಾಶಯಗಳು...??
- Sunil Bgm kannada
05 Sep 2024, 07:39 am
Download App from Playstore: