"ನೀನು...."
"ನನ್ನ ಮಾತುಗಳೆಲ್ಲ ಸೋತಾಗ,
ನಾ ಕಣ್ಮುಚ್ಚಿ ಕೇಳುವ ಹಾಡುಗಳ ಹುಡುಕು,
ನಾ ಮೈಮರೆತು ಗುನುಗುವ ಹಾಡುಗಳ ಬೆದಕು.
ಆ ಹಾಡುಗಳಂತಹ ಹಾಡುಗಳ ಹಾಡು,
ಆ ಹಾಡುಗಳ ನಡುವಿನ ನೀರವ ಮೌನವ ನೋಡು. ಸಾವಿರ ಪದಗಳಿರಬಹುದೇನೋ ಆ ಕಡುಗತ್ತಲಲ್ಲಿ.
ನಾ ಆಡದೆ ಅವಿತಿಟ್ಟ ಮಾತುಗಳೆಲ್ಲ ಅಡಗಿರಬಹುದೇನೋ ಆ ಮೌನದಲ್ಲಿ "...!
-ಆಶಾ✍️
- Asha S A
14 Aug 2024, 02:03 pm
Download App from Playstore: