"ಕವಿತೆ...."
ಕವಿತೆ ಹುಟ್ಟಬೇಕಾದರೆ,
ನಿಸರ್ಗ ಸೌಂದರ್ಯದ ರಮಣೀಯ ವರ್ಣನೆ, ಪರಿಸರ ಗುಟ್ಟಿಗೆ ಕಿವಿಯಾದ ಕವಿಯ ಕಲ್ಪನೆ!
ಭಾವಾತಿರೇಕವು ಉತ್ತುಂಗ ಅನುಭವವೇ, ಭವ-ಬಂಧನದಲ್ಲಿ ಅಕ್ಷರ ಸಾಲುಗಳ ಆಗರವೇ!
ಒಂಟಿತನದ ಮೌನ-ರಾಗಗಳ ಪದ ಮಾಲೆ, ಅನುಬಂಧದೊಳು ಅನುಭಾವ ಕುಂಚದ ಲೀಲೆ!
ಪ್ರೀತಿಯಲ್ಲಿ ಮುಳುಗಿದವರೆಲ್ಲಾ ಕವಿಗಳೇ, ಪ್ರೀತಿಯ ನುಡಿಗಳೆಲ್ಲವೂ ಕವಿತೆಗಳೇ!
-ಆಶಾ✍️
- Asha S A
12 Aug 2024, 08:56 am
Download App from Playstore: