ಕನ್ನಡ
ಇದು ಕೇವಲ ಭಾಷೆಯಲ್ಲ
ಇದೊಂದು ಭಾವನೆ, ಹೃದಯದ ಭಾಷೆ.
ತಾಯಿಯಂತೆ ಕಾಣುವ ನಾವು
ಕಾಯುವ ಗುಣವಿರಲಿ.
ಎರಡು ಸಾವಿರದ ಐದನೂರು ವರ್ಷಗಳ
ಇತಿಹಾಸವಿರುವ ಮಾತೃಭಾಷೆಗೆ ಸಮ್ಮಾನವಿರಲಿ.
ಸಾಹಿತ್ಯಕ್ಕೆ ಅತಿ ಹೆಚ್ಚು ಪ್ರಶಸ್ತಿ ಪಡೆದುಕೊಂಡಿರುವ
ಈ ಭಾಷೆಗೆ ಸ್ಥಾನ-ಮಾನ ಸಿಗಲಿ.
ಹೃದಯದ ಭಾಷೆ ಕನ್ನಡವಾಗಿರಲಿ.
ದುಡಿಮೆಯಲ್ಲಿ ಅನ್ಯ ಭಾಷೆ ಇರಲಿ.
ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದೆ
ಪ್ರತಿ ದಿನವೂ ಕನ್ನಡವಾಗಲಿ.
ಜೀವನದಲ್ಲಿ ಭಾಷೆ ಮುಖ್ಯ
ಅದುವೇ ಮಾತೃ ಭಾಷೆಯಾಗಿರಲಿ.
- Shraddha H
09 Aug 2024, 09:25 pm
Download App from Playstore: