ಭೂಮಿಗೆ ಬಂದ ಮಳೆ
ಮಳೆ ಮಳೆ ಮೋಡ ಕವಿದ ಮಳೆ
ಬಾನ ತುಂಬಾ ಬೆಳಗುತ್ತಿದೆ ಮಿಂಚಿನ ಮಳೆ
ಹಳ್ಳ ಕೊಳ್ಳ, ನದಿಯನು ತುಂಬಿಸುವ ಮಳೆ
ಆ ಗಂಗೆಯ ಹರಿವಿಗೆ ನಳನಳಿಸುವ ಮಳೆ
ರೈತರಿಗಾಗಿ ಮಿಡಿಯುತ್ತಿದೆ ತುಂತುರು ಮಳೆ
ಬೆಳೆಗಳು ಬೆಳೆಯಲು ಕಾತಾರಿಸೋ ಮಳೆ
ಭೂಮಿಯ ಬಿಸಿಯನು ಹಾರಿಸುವ ಮಳೆ
ಮುತ್ತಿನ ಹನಿಯನು ಕಾರುವ ಹವಳ ಮಳೆ
ನಿಸರ್ಗದ ಮೈಯನ್ನು ತೊಳೆಯುವ ಮಳೆ
ಹಸಿರು ಗಿಡ ಮರಗಳಿಗೆ ಆಸರೆಯಾದ ಮಳೆ
ಪ್ರಾಣಿ ಪಕ್ಷಿಗಳಿಗೆ ದಾಹವನ್ನಿಂಗಿಸುವ ಮಳೆ
ಕಾಡು ಮೇಡುಗಳ ಮಿತ್ರನಾಗಿರುವ ಮಳೆ
ಬರಗಾಲವನ್ನು ದೂರ ಸರಿಸಿರುವ ಮಳೆ
ನೆಲದಲ್ಲಿರುವ ಬಿರುಕನ್ನು ಮುಚ್ಚಿರೋ ಮಳೆ
ಮನುಕುಲ ಅನ್ನವ ತಿನ್ನಲು ನೆರವಾದ ಮಳೆ
ಮಲೆನಾಡಿನ ಮಂಜಿಗೆ ಕಾರಣವಾದ ಮಳೆ
ನವಿಲಿನ ನಾಟ್ಯಕ್ಕೆ ಆನಂದಿಸುವ ಮಳೆ
ಕಾಮನಬಿಲ್ಲಿನ ಏಳು ಬಣ್ಣಗಳ ಸೃಷ್ಟಿಯ ಮಳೆ
ಸಿಡಿಲು ಮಿಂಚನು ಘರ್ಷಿಸುತ್ತಿರೋ ಮಳೆ
ಚಿಗುರುವ ಮಕ್ಕಳನು ನಗಿಸುತ್ತಿರುವ ಮಳೆ
❤️ ವಿರೇಶ ಉಪ್ಪಾರ್
- Viresh uppar
21 Jul 2024, 06:35 pm
Download App from Playstore: