ಕವನದ ಶೀರ್ಷಿಕೆ ಗುರುವಿನ ಸಂಸ್ಕಾರ.
ವಿವಿಧ ಹೂ ಮನಗಳ ಮಾಲೆ ಮಾಡಿ,
ಶಿಕ್ಷಕ ಏಕತೆಯ ಕಂಪು ನೀಡಿ,
ನಲಿಯುತ ಕಲಿಸುವ ಮಕ್ಕಳಿಗೆ
ಅಂಗಳದ ಆಟದಿ ತಾನೊಟ್ಟುಗೂಡಿ.
ಮಗುವಿನ ಕಲಿಕೆಗೆ ನಕ್ಷತ್ರವಾಗಿ,
ಭವಿಷ್ಯದ ಬುನಾದಿಗೆ ಕನ್ನಡಿಯಾಗಿ,
ಸಹಾನುಭೂತಿ ಶಿಕ್ಷಕ ದುಡಿಯುವ
ಮಕ್ಕಳ ಸಾಧನೆಯ ಯಶಸ್ಸಿಗಾಗಿ.
ಚಿಗುರುವ ಲತೆಗಳ ತಪ್ಪಿಗಿಲ್ಲ ಬೇಸರ,
ಮಗುವಿನ ಜ್ಞಾನಕ್ಕೆ ಹೊಂಬಣ್ಣ ಕೊಡುವ ಸರದಾರ,
ಜನರ ನೋವನ್ನು ಮರೆಸುವ ವಿದ್ಯೆ,
ಪಡೆಯುವುದು ಧರೆಯನಾಳಲು ಸದ್ಗುರುವಿನ ಸಂಸ್ಕಾರ. ಅಮೂರ್ತ ವಿಷಯಗಳ ಅರ್ಜನೆಗೆ
ಸಹಕರಿಸುವ ಗುರೂ ಹೊಸ ಸಂಶೋಧನೆಗೆ,
ಪಾರದರ್ಶಕದಿ ಪಡೆದ ಸಂಸ್ಕೃತಿ,
ಪಸರಿಸುವುದು ಗುರುವಿನ ಹೆಸರೊಂದಿಗೆ.
ಬುದ್ಧ ನೀಡಿದ ಜ್ಞಾನದ ಬೆಳಕು,
ಜಗಕೆ ಕಲಿಸಿದೆ ಶಾಂತಿಯ ಬದುಕು,
ಕಷ್ಟಗಳಿಗೆ ಅಂಜದೆ ನಡೆ ಮುಂದಕೆ,
ತೃಷೆಯಿರುವ ಮನುಜಗೆ ನಿ ನೀರಾದರೆ ಸಾಕು.
ರಚನೆ ಶ್ರೀಮತಿ ನಾಗಮಣಿ h b
ಸಹಶಿಕ್ಷಕಿ G HP S ಧರ್ಮಪುರ.
- nagamani Kanaka
21 Jul 2024, 05:44 pm
Download App from Playstore: