ಕಾವ್ಯ ಗಂಗೆ
ಬಾ ಎನ್ನ ಕಾವ್ಯ ಗಂಗೆ ,
ಎನ್ನ ಹೃದಯವು ಬತ್ತಿದೆ ನಿನ್ನ ಹರಿವಿಲ್ಲದೆ.
ಪ್ರೇಮ ಮಲ್ಲಿಗೆಯು ಬಾಡುತಿಹುದು ನಿನ್ನ ಸಾನಿಧ್ಯವಿಲ್ಲದೆ. ಚಾತಕ ಪಕ್ಷಿ ಮುಂಗಾರಿಗಾಗಿ ಹವಣಿಸುವಂತೆ, ಹವಣಿಸುತ್ತಿರುವೆ ನಾ ನಿನ್ನ ಆಗಮನಕ್ಕೆ .ಎನ್ನ ಹೃದಯದ ಚಿಪ್ಪಿನಲ್ಲಿ,
ಅವಿತ್ತಿಟ್ಟಿರುವೆ ಕಾವ್ಯ ಮುತ್ತನ್ನು, ಉಡುಗೊರೆಯಾಗಿ.
ವಸಂತ ಕಾಲದಲ್ಲಿ ಜೇನಿನ ಪರಾಗಸ್ಪರ್ಷಕ್ಕೆ ವನಕುಸುಮಗಳು ಕಾದಿರುವಂತೆ ನಾ ಕಾಯುತ್ತಿರುವೆ ನಿನ್ನ ಅಮೋಘ ಭಾವಸ್ಪರ್ಶಕ್ಕೆ ,
ಬಾ ನನ್ನ ಕಾವ್ಯ,
ಹರಿಸೆನ್ನಲ್ಲಿ ಪ್ರೇಮ ವರ್ಷ,
ಮಯೂರನಂತೆ ಹರಡುವೆ ಪದ ಗುಚ್ಚವನ್ನು ,ನಿನ್ನ ಹಾಡಿ ಹೋಗಳಲು ನೀ ಹಾಡಾದರೆ ,ನಾ ಸ್ವರವಾಗುವೆ. ಬಾ ನನ್ನ ಕಾವ್ಯ ನಾವಿಬ್ಬರು ಸೇರಿ ಹಾಡುವ ಜೀವರಾಗ.
ಭಾವ( ಆಲ್ವಿನ್ ಪವನ್ ಹಾಸನ)
- alwin pavan
10 Jul 2024, 12:17 am
Download App from Playstore: