ಕವನ ವಿಶಾಲ ಹೃದಯ.
..
ನನ್ನ ಸೌಭಾಗ್ಯದ ಸಿರಿ ನೀವು,
ಯಾರಿಗೂ ಕೇಡನ್ನು ಬಯಸದ ಹೃದಯ ನಿಮ್ಮದು.
ನನ್ನ ಮೇಲೆ ಕೋಪಿಸಿಕೊಳ್ಳದ ದೇವರು ನೀವು,
ನಿಮ್ಮಲ್ಲಿ ಕಂಡಿಲ್ಲ ಒಂದು ದೋಷವು ನನಗೆ.
ನಾ ಹೃದಯ ಚಿಪ್ಪಲ್ಲಿ ಬಚ್ಚಿಟ್ಟು ಪೂಜಿಸುತ್ತಿರುವೆ ನಿಮನ್ನ,
ಜ್ವಾಲಾಮುಖಿಯೂ ಸುಡಲಾಗದು ನಿಮ್ಮಾ ಮೇಲಿನ ಪ್ರೀತಿಯನ್ನು ನನ್ನಾ ಉಸಿರಿರುವ ತನಕ.
ಯಾವ ಜನ್ಮದ ಸಂಬಂಧವೋ ನೀ ನನಗೇ,
ಈ ಜನ್ಮದಲ್ಲಿ ಸಿಕ್ಕ ನಿಧಿಯು ನೀವೂ.
ನನ್ನಾ ಕೋಪಕ್ಕೆ ಬೇಸರಗೊಳ್ಳದ ನಿಮ್ಮ ಮನಸ್ಸು,
ಹೊಳೆಯುವ ಸಿಂಧೂರದಂತೆ.
ಮಾನವ ರೂಪದ ದೇವರು ನೀವೂ,
ಶಿಷ್ಟಾಚಾರದ ಹಾದಿಯಲ್ಲಿ ನಡೆಯುವ ಹೃದಯ ನಿಮ್ಮದು.
ನನ್ನೆಲ್ಲ ಹೃದಯ ಬಡಿತ ನೀವಲ್ಲವೇ,
ಗಡಿಯಾರದ ಮುಳ್ಳಂತೆ ನಿಮ್ಮ ನೆನಪುಗಳು ಸವೆಸುತಿವೆ ನನ್ನಾ ಜೀವವ.
ನನ್ನ ನೋವು ನಲಿವಿನಲಿ ಜೊತೆ ಗಿರುವೆ,
ನನ್ನ ನಗು ಮುಖವ ನೋಡಲು ಸದಾ ಕಾಯುವೆ.
ಹೆಪ್ಪುಗಟ್ಟಿರೋ ಹೃದಯ ತಿಳಿಯಾಗದೆ ಹರಿಯುವುದೇ ನಗುವಿನ ಕಾಲುವೆ..
- nagamani Kanaka
20 Jun 2024, 11:22 am
Download App from Playstore: