ಮನವಿ
ಮನಸ್ಸಿನಲ್ಲಿ ಮನೆಯ ಮಾಡಿ
ಮನೆಯಲ್ಲಿ ದೀಪ ಬೆಳಗಿ
ನನ್ನ ಬಾಳು ಬೆಳಗಿದ ನನಗೆ
ಇದು ನಾನು ಹೇಳಿದೆ ಪ್ರೀತಿಯ ವಂದನೆ
ಕಷ್ಟಗಳನ್ನು ಕಂಡು ಕೂರಗಿದ್ದ ಮನಸ್ಸಿಗೆ
ನಿನ್ ಕಂಡ ಪ್ರೀತಿಯ ಸುಪ್ಪತ್ತಿಗೆ
ಕಷ್ಟ ಸುಖದಲ್ಲಿ ಜೊತೆ ಇರುವ ಎಂದಿಗೂ ಹೀಗೆ
ಬಯಸುವುದು ಈ ಜೀವ ಇರಲು ಎಂದಿಗೂ ನಿನ್ನೊಟ್ಟಿಗೆ
ಅಪ್ಪ ಅಮ್ಮನ ಪ್ರೀತಿ ಕೊಟ್ಟೆ ನೀನು
ನಿನ್ನ ಕಂಡು ಬೆರಗಾದೆ ನಾನು
ಮಗುವಿನಂತೆ ಹಾರೈಸಿದೆ ನನ್ನ
ನಾನಿರಲಾರೆ ಬಿಟ್ಟು ನಿನ್ನ
ಕಣ್ಣಿನ ಕಂಬನಿಯು ಮರೆಯಾಗಿದೆ ನಿನ್ನ ಪ್ರೀತಿಯಿಂದ
ಹೃದಯ ತುಂಬಿ ಬಂದಿದೆ ಸಂತೋಷದ ಛಾಯೆ ನಿನ್ನಿಂದ
ಇದೊಂದು ಕನಸಾಗದೆ ಇರಲಿ ಎಂದೆಂದಿಗೂ ನಿನ್ನ ಸಾಗಲಿ
ನನ್ನ ಪ್ರೀತಿಯ ಹುಡುಗ ಇದೇ ನನ್ನ ಆಶಯ ಇರಲಿ ನಿನ್ನ ಶುಭಾಶಯ
- RoopaGowtham
07 Jun 2024, 04:41 pm
Download App from Playstore: