ಮನಸಾ

ಪ್ರೀತಿ ನೀನೆ ನನ್ನ ಒಲವು
ಮನದಾಳದಲ್ಲಿ ಅಡಗಿರುವ ಛಲವು
ಪ್ರೀತಿ ಪ್ರೀತಿ ಪ್ರೀತಿ ನಿನ್ನಿಂದಲೇ ಸದ್ದತಿ
ನಾನೆಂದು ಬಯಸುವ ಆಗಲು ನಿನ್ನೊಡತಿ

ನನ್ನ ಪ್ರೀತಿಯ ರಾಯಭಾರಿ ನೀನೇ
ಮನಸಿನ ತುಂಬೆಲ್ಲ ನಿನ್ನ ಪ್ರೀತಿಯ ಛಾಯೆ
ಮಾಡಿದೆ ನೀನೆಂತಹ ಮಾಯೆ
ಪ್ರೀತಿಯಿಂದ ಕೂಡಿದ ಜೀವನವೇ ವಿಸ್ಮಯ

ಪ್ರೀತಿಯ ಪಯಣವು ಸಾಗಲಿ ಜಗದಲಿ
ವಿರಸಗಳು ಕೊನೆಯಾಗಲಿ ಪ್ರೀತಿಯಲ್ಲಿ
ಸರಸ ಸಲ್ಲಾಪಗಳು ಶುರುವಾಗಲಿ
ಕೊನೆಗೆ ಪ್ರೀತಿಯೇ ಅಮರವಾಗಲಿ
ಪ್ರೀತಿ ಪ್ರೀತಿ ನೀನೇ ನನಗೆಲ್ಲ ನಿನ್ನಿಂದಲೇ ಎಲ್ಲಾ

- RoopaGowtham

31 May 2024, 11:31 am
Download App from Playstore: