ನನ್ನ ಹುಡುಗಿ
ದಾರಿಯಲ್ಲಿ ಹೋಗುವಾಗ ಪಕ್ಕದಲ್ಲಿ ಬಂದು ನಿಂತಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅರಳಿತು ಅನುರಾಗ
ಮನಸೇಳುತ್ತಿತ್ತು ನೀನೆ ನನ್ನ ಹುಡುಗಿ ಎಂದು
ನಿನಗೇನನಿಸಿತು ಅಂದು ನಾನು ಹೇಳಿದಾಗ ನೀನೆ ನನ್ನ ಅವಳೆಂದು
ನನ್ನ ಮನಸ್ಸಿನ ಪುಟ್ಟ ಗುಬ್ಬಿಮರಿ ನೀನು
ನನ್ನ ಉಸಿರಿಗೆ ಉಸಿರಾಗು ನೀನು
ಮನದಾಸೆಯ ಗಾಳಿಪಟ ಆಡಿದ ಬಿಟ್ಟಾಗ
ಸೂತ್ರದೊಂದಿಗೆ ನೀ ಸೇರು ನನ್ನ ಬೇಗ
ಕಣ್ಣಲ್ಲಿನ ಪ್ರತಿಬಿಂಬ ನೀನು
ತುಟಿಯಂಚಲ್ಲಿ ನಗುವು ನೀನು
ನನ್ನ ನೆನಪಿನ ತುಂಬೆಲ್ಲ ನಿನ್ನದೇ ಧ್ಯಾನ
ನೀನಿಲ್ಲದೆ ಇಲ್ಲ ನನ್ನ ಜೀವನ
ಕಾದಿರುವುದು ಈ ಜೀವ
ನಿನಗಾಗಿ
ಪರಿ ತಪಿಸಿದೆ ಈ ತೋಳುಗಳು ನಿನ್ನ ಅಪ್ಪುಗೆಗಾಗಿ
ತುಟಿಯಂಚಲಿ ಅಡಗಿದೆ ಮಾತೊಂದು ನಿನಗಾಗಿ
ಅದೇನಂದರೆ ನಾನಿರುವುದೇ ನಿನಗಾಗಿ
- RoopaGowtham
28 May 2024, 12:31 pm
Download App from Playstore: