ಹಣ

ಪ್ರೀತಿಯು
ಮಂಡಿಯೂರಿತಂತೆ
ಹಣದ ಮುಂದೆ

ವಾತ್ಸಲ್ಯವು
ವಾಕರಿಸಿತಂತೆ
ಹಣದ ಮುಂದೆ

ಅಕ್ಕರೆಯು
ಸಕ್ಕರೆಯ ರುಚಿಯ
ಕಳೆದುಕೊಂಡಿತಂತೆ
ಹಣದ ಮುಂದೆ

ನಂಬಿಕೆಯು
ನಕ್ಕಿ ನಾಶವಾಯಿತಂತೆ
ಹಣದ ಮುಂದೆ

ರೊಕ್ಕವೇ ಎಲ್ಲವೂ
ಹಾಗಿರುವಾಗ
ಪಕ್ಕದವರು ನಕ್ಕರಂತೆ
ಹಣ ಇರದೇ ಇರುವಾಗ

ಜಗವೇ ಹಣದ
ಹಿಂದೆ ಓಡುತ್ತಿರುವಾಗ
ನಮ್ಮವರೆನಿಸಿಕೊಂಡವರು
ಓಡುತ್ತಿರುವದಲ್ಲಿ ತಪ್ಪೇನಿದೆ ?
ಹಣದ ಹಿಂದೆ ಬೀಳದ
ನಮ್ಮ ತಪ್ಪು ಇದೆ ?

?️ಸತೀಶ್ ಕಳುವರಹಳ್ಳಿ

- ಸತೀಶ್ ಕಳುವರಹಳ್ಳಿ

23 May 2024, 08:05 pm
Download App from Playstore: