ಕಾಂಚಾಣ
"ಕಾಂಚಾಣ..... "
ಗುಡಿಸಲಿಗೆ ಹೆದರಿದ್ದು
ಗುಡಿಗಳಿಗೆ ಸೇರಿದ್ದು
ಜೋಪಡಿಯ ಹರಿದದ್ದು
ಅರಮನೆಯ ಹೊಕ್ಕಿದ್ದು
ಹಸಿದೊಡಲ ಒದ್ದದ್ದು
ಉಳ್ಳವರ ಮೆರೆಸಿದ್ದು
ಬಡತನವ ಕೆಣಕಿದ್ದು
ಸಿರಿತನವ ತಬ್ಬಿದ್ದು
ಕೇರಿಯಲಿ ಕಾಣದ್ದು
ಪೇಟೆಯಲಿ ತಿರುಗಿದ್ದು
ಹಗಲ ಬೆವರಿಗೆ ಸಿಗದದ್ದು
ಇರುಳ ರಾತ್ರಿಗೆ ಸುರಿದದ್ದು
ಕೈಗೆ ಸಿಗದ ಕಾಂಚಾಣ
ಮೈಗೆ ಸಿಗುವುದು ಕಾಣಾ....?!?
- Karigarana Kanavarikegalu
22 May 2024, 07:47 pm
Download App from Playstore: