ಕಲ್ಪನೆಯ ಕವಿತೆ..........
ನೈದಿಲೆ ವದನದಲಿ ತಾರೆಯಂತಹ ಲೋಚನವು,
ನೇಸರದಂತೆ ಪ್ರಕಾಶಿಸುವ ರೂಪದಲಿ
ರಂಗು ಕಾಂಚನವು ,
ಶಶಿಯಂತೆ ಮುಗುಳುನಗುವ ಬಾಯ್ದೆಗಳು,
ನಿಷ್ಕಲ್ಮಶ ಮನದಲಿ ಕಂಪಿಸುವ ಕಾದಂಬರಿಗಳು,
ಚಲಿಸಿದರೆ ಚಂದನದ ಕಸ್ತೂರಿಯಂತೆ
ನೆಲೆಸಿದರೆ ಹರಸುವ ದಿವಿಜೆಯಂತೆ
ಬಣ್ಣಿಸಲು ಸಾಧ್ಯವಿಲ್ಲ ಗೀತೆಗಳ ಗುಚ್ಛದಲಿ
ಪ್ರಕೃತಿಯ ಉಡಿಯಲ್ಲಿ ಸಾಗುವೆ ವಾಹಿನಿಯಲಿ
ಧರೆಗೆ ಇಳಿದ ಹಿಮದಂತೆ, ತಮಾಲನ್ನು ವಿಪ್ಲವಿಸುವ ತೈಜಸದಂತೆ , ರೆಕ್ಕೆ ಇಲ್ಲದೆ ತೇಲುವ ವಿಹಂಗದಂತೆ,
ವಾಗ್ದೇವಿಯ ಮಿಸುನಿ ನೀ
ಕಾಳಿದಾಸನ ಕೃತಿಯು ನೀ,
ಸದ್ಗುಣಗಳ ಸುಮನಸವು ,ಹಚ್ಚ ಹಸಿರಿನಿಂದ ಕಂಗೊಳಿಸಲಿ ಮನವು.
- Rakshithkumar u.r
18 May 2024, 10:21 am
Download App from Playstore: