? ಅಮ್ಮ (ತ್ಯಾಗಮಯಿ)
ನಿನ್ನಂತೆಯಾರಿಲ್ಲ ಅಮ್ಮ ಜಗದಲಿ
ಪೂಜಿಸುವೆ ನಿನ್ನ ದಿನವಿಡೀ ಮನದಲಿ...
ಉಸಿರು ಹೆಸರು ಕೊಟ್ಟು ಜೋಗುಳ ಹಾಡಿದವಳು
ನೀತಿ ರೀತಿ ಕಲಿಸಿ ಬದುಕು ತೋರಿಸಿದವಳು...
ತನಗಿಲ್ಲದಿದ್ದರು ತುತ್ತನಿಟ್ಟು ಹಸಿವು ನೀಗಿಸಿದವಳು
ನಮಗಾಗಿ ರಾತ್ರಿವಿಡಿ ನಿದ್ದೆ ಬಿಟ್ಟು ದುಡಿದವಳು...
ನಿನ್ನ ನಿಸ್ವಾರ್ಥ ಸೇವೆ ನನ್ನ ಬದುಕಿನುದ್ದಕ್ಕೂಆಸರೆ ನನ್ನ ಈ ಜೀವನ ಸದಾ ನಿನಗಾಗಿ ಮೀಸಲಿಡುವೆ...
ನಿನ್ನೆಲ್ಲ ಕಷ್ಟಗಳನ್ನ ಸಹಿಸಿ ನನ್ನ ಸಲುಹಿದವಳು
ತೀರಿಸುವೆನಮ್ಮ ನಿನ್ನ ಋಣ ನನ್ನ ಕೈಲಾದಷ್ಟು...
ತನಗೆನು ಬಯಿಸದೆ ನಿಷ್ಕಲ್ಮಶವಾಗಿ ಹರಿಸಿದವಳು
ನನ್ನ ಜೀವನಕೆ ಬೆನ್ನೆಲುಬಾಗಿ ನಿಂತವಳು...
ನಿನ್ನಂತೆಯಾರಿಲ್ಲ ಅಮ್ಮ ಜಗದಲಿ
ಪೂಜಿಸುವೆ ನಿನ್ನ ದಿನವಿಡೀ ಮನದಲಿ...
- Bhagirathi Jante
12 May 2024, 01:12 am
Download App from Playstore: