ಕನಸಿನ ಕನ್ನಿಕೆ

ಸಖೀ ನಿನ್ನ ಚೆಲುವ ನೋಟಕೆ
ಎನ್ನ ಮನ ಕೊಳದಲ್ಲಿ
ಮತ್ಸ್ಯ ಆಲಿಂಗನ ಮಾಡಿದೆ.....
.....ನೇಸರನ ಪ್ರಳಯದಾಟಕೆ
ಕೆಂದಾವರೆಯ ನಿನ್ನ ಮುಖವು
ನಾಚಿ ನೀರಾಗಿ ನಿನ್ನ ಕಣ್ಣೋಟದಲಿ
ಸೇರಿದೆ...‌
ಮನ್ವಂತರಿಯೋ...ಸೊಬಗೋ....
ಆಹ್ಲಾದವೋ...ಮನಕನ್ನಿಕೆಯೇ...
ನಿನ್ನ ಸೊಬಗಿನ ಚೆಲುವಿನ
ಮಿಂಚುಳ್ಳಿ ಪ್ರೇಯಸಿ...
ಆಲಂಗಿಸು..ಚುಂಬಿಸು..
ಶೋಭಿಸು...ಪ್ರಲಾಪಿಸು....
ಓ...ಚಂದ್ರಮ ನಿನ್ನ ಕೆಂದುಟಿಯ
ಓಕುಳಿಯು.. ಬಾಚಿ ಎರಕ ಹೊಯ್ದಿದೆ..
ಎನ್ನ ಕನಸಿನ ಅರಮನೆಯ ಗೋಡೆಗೆ
ಮಧುರವೋ...ನೈದಿಲೆಯೋ...
ಸ್ಪರ್ಶವೋ... ನಿನ್ನ ಮುಂಗುರುಳ ಲತೆಯೂ
ಹಸಿರ ತಳಿರು ತೋರಣ
ಕಟ್ಟಿವೆ...ಎನ್ನ ಮನದ ಅರಮನೆಯ ಬಾಗಿಲಿಗೆ
....ಸಿಂಗರಿಸುವೇ... ನಿನ್ನ ಕೋಮಲಾಂಗಿ
ಮಧುರಾಂಗಿ..ಬಾ ಒಮ್ಮೆ ಎನ್ನ ಮನದ
ಅರಮನೆಯ ಸೇರಲಿಕ್ಕೆ......

ಇಂತಿ ನಿನ್ನ....ಸಮ


- satish

09 May 2024, 06:49 pm
Download App from Playstore: