ಯೊಚನೆ ಮತ್ತು ಭಾವನೆ
ಲೆಕ್ಕಾಚಾರವಿಲ್ಲದ ಭಾವನೆಗಳು
ತಡೆಹಿಡಿಯದ ಗೋಡೆಗಳಂತೆ
ಅರ್ಥವಿಲ್ಲದ ಯೋಚನೆಗಳು
ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ
ಭಾವನೆಗಳು ಮತ್ತು ಯೋಚನೆಗಳು
ಒಂದಕ್ಕೊಂದು ಕೊಂಡಿ ಇದ್ದಂತೆ
ಎರಡರಲ್ಲಿ ಹಿಡಿತವಿಲ್ಲದಿದ್ದರೆ
ಮುಂದಾಗುವ ಅನಾಹುತಕ್ಕೆ ಹೊಣೆಯರಂತೆ
ನನ್ನಲ್ಲಿ ನನಗೆ ಸಾವಿರ ಪ್ರಶ್ನೆ ಇದೆ
ಅದನ್ನು ಸಮರ್ಥಿಸಿಕೊಳ್ಳಲು ಉತ್ತರ ನನ್ನಲ್ಲಿದೆ
ನನ್ನ ಉತ್ತರ ಯಾರನ್ನು ಮೆಚ್ಚಿಸದು
ಮೆಚ್ಚಿಸುವುದರಿಂದ ನನಗೆನು ದಕ್ಕದು
- HTK
19 Apr 2024, 06:17 pm
Download App from Playstore: