ಮನಸ್ಸಿನ ಗೊಂದಲ

ಮನಸಲೇನೊ ತಳಮಳ ಇಂದು
ಕಾರಣ ತಿಳಿಯದಾಗಿದೆ ಏನು ಎಂದು
ಮನದಲ್ಲಿ ಹೇಳಲಾಗದ ಭಾವನೆ ಒಂದು
ಹುಡುಕಬೇಕಿದೆ ಕಾರಣವೇನೆಂದು

ಹೊಸದೇನೋ ಹೊಸತೇನೋ
ಅರಿಯಲಾಗದ ಭಾವನೆ ಏನೋ
ಭಯವೇನೋ ಭರವಸೆಯೇನೋ
ತಿಳಿಯದಿರುವ ಭವಿಷ್ಯವೇನೋ

ಸಡಗರವೇನೋ ಸಂಭ್ರಮವೇನೋ
ನಿನ್ನೊಂದಿಗೆ ಕಳೆದಿರುವ ಸಮಯವೇನೋ
ಕಾಳಜಿಯೇನೋ ಕನಿಕರವೇನೋ
ನಿನ್ನಲ್ಲಿ ಇಟ್ಟಿರುವ ನಂಬಿಕೆಯೋನೋ

ತಿಳಿಯದಾಗಿದೆ ತೋಚದಾಗಿದೆ
ಇದಕ್ಕೆಲ್ಲ ಉತ್ತರ ನಿನ್ನಲ್ಲಿದೆ...

- HTK

31 Mar 2024, 06:49 pm
Download App from Playstore: