ಆ ದಿನ

ಅವನ ಮೊದಲ ಕಣ್ ನೋಟಕ್ಕೆ ಮನ ಸೋತ ಆ ದಿನ,
ಆತನ ನಗುವನ್ನು ಕದ್ದು ನೋಡಿದ ಆ ದಿನ
ತಿರುಗಿ ಒಮ್ಮೆ ನನ್ನ ನೋಡಬಾರದೇ ಎಂದೇನಿಸಿದ ಆ ದಿನ,
ಒಂದು ಮಾತನಾದರು ಆಡಬಾರದೇ ಎಂದು ಕೊಂಡ ಆ ದಿನ,
ಅವನು ಅಹಂ ತೋರಿಸುತ್ತಿದ್ದನೆ ಅಂದುಕೊಂಡ ಆ ದಿನ,
ಅವನ ನೋಟವನ್ನು ಗಮನಿಸಿದರು ಗಮನಿಸಿದಂತೆ ನಟಿಸಿದ ಆ ದಿನ,
ಆವನಾಗಿಯೇ ಬಂದು ನನ್ನ ಮಾತಾಡಿಸಿದ ಆ ದಿನ,
ಮೊದಲ ಬಾರಿಗೆ ಪ್ರೀತಿಯನ್ನು ವ್ಯಕ್ತ ಪಡಿಸಿದ ಆ ದಿನ,
ಅವನ ಪ್ರೀತಿಯ ಹೃದಯಕ್ಕೆ ಲಗ್ಗೆ ಇಟ್ಟ ಆ ದಿನ,
ಅವನ ಜೊತೆ ಸಪ್ತಪದಿ ತುಳಿದ ಆ ದಿನ,
ಅವನ ಹೆಸರಿನ ಜೊತೆಗೆ ನನ್ನ ಹೆಸರ ಸೇರಿಸಿದ ಆ ದಿನ,
ಅವನ ಮನೆಗೆ ಸೇರೋದ್ದು ಬಲಗಾಲು ಇಟ್ಟ ಆ ದಿನ,
ಸುಖ ದುಃಖಗಳಲಿ ಒಂದಾಗಿ ಬಾಳಿದ ಆ ದಿನ,
ಬದುಕಿನ ಬುತ್ತಿಯೊಳ್ ಇನ್ನೆಷ್ಟು ಆ ದಿನಗಳು,
ಸೇರುತಿಹುದು ಕನಸೆಂಬ ಆ ದಿನದೊಳ್......!
Love Kasthury

- kasthury k

30 Mar 2024, 08:23 pm
Download App from Playstore: