ನೆನಪುಗಳು.... ಹುಡುಕಾಟ....
ವರುಷಗಳ ನಂತರ ಒಂದು ದಿನ
ಜೀವನದಲ್ಲೇನೋ ಮಹತ್ವವಾದುದನ್ನು ಕಳೆದುಕೊಂಡಿರುವೆ ಅನ್ನಿಸಿದಾಗ
ನನ್ನನ್ನು ಹುಡುಕಬಹುದು
ಹಳೆ ನೆನಪಿನ ಪುಟಗಳನ್ನು ತಿರುವಿ ಹಾಕಬಹುದು
ನನಗೆ ಕರೆಮಾಡಬಹುದು, ಕಾಗದ ಬರೆಯಬಹುದು
ನಾನು ಉತ್ತರಿಸುವುದಿಲ್ಲ ಅಲ್ಲಿ ನಾನಲ್ಲಿರಿವುದಿಲ್ಲ
ಕಾಲ ಸರಿದು ಎಲ್ಲವೂ ಬದಲಾಗಿದೆ ನಾನು ಕೂಡ...
ಆಗ ನನ್ನ ಆಸ್ತಿತ್ವವನ್ನು ತಿಳಿಯಲೆತ್ನಿಸಬಹುದು ಭಾವನಾತ್ಮಕವಾಗಿ ನೆನಪುಗಳನ್ನು ಕೆದಕಬಹುದು
ನೀನು ಪ್ರೀತಿಸುವವರಲ್ಲಿ ನನ್ನನ್ನು ಕಾಣಲು
ಪ್ರಯತ್ನಿಸಿರಬಹುದು ಅವರು ನಿನ್ನನ್ನು ನನ್ನಷ್ಟೇ ಪ್ರೀತಿಸಿರಬಹುದು, ನನ್ನಷ್ಟೇ ನಿನನ್ನು ನಗಿಸಿರಬಹುದು
ಆದರೆ ನಿನಗೆ ತಕ್ಷಣ ಅರ್ಥವಾಗುತ್ತೆ
ಅವರು ನಾನಾಗಲು ಸಾಧ್ಯವಿಲ್ಲ
ಏಕೆಂದರೆ ಅದೊಂದು ವಿಶಿಷ್ಟ ಪ್ರೀತಿ ವಿಶೇಷ ...
ನಾನು ನಿನಗಾಗಿಯೇ ಕಾಯುತಿದ್ದೆ ನನ್ನನ್ನು
ಕಳೆದುಕೊಂಡೆ ನನ್ನ ನೆನಪುಗಳನ್ನು...
ನಿನ್ನ ಉಳಿದ ದಿನಗಳನ್ನು ನನ್ನ ಕುರುಹುಗಳನ್ನ
ಬೇರೆಯವರ ಹೃದಯಗಳಲ್ಲಿ ಪ್ರೀತಿಯಲ್ಲಿ ಹುಡುಕಲು
ಪ್ರಯತ್ನಿಸಬಹುದು ಆದರೆ ನಾನು ಸಿಗುವುದಿಲ್ಲ
ಏಕೆಂದರೆ ಅದೊಂದು..............
- ಶಶಿಧರ ಹೆಚ್ ಎನ್
15 Mar 2024, 05:39 pm
Download App from Playstore: