ಎಚ್ಚರ ತಂಗೆಮ್ಮಾ

ಎಚ್ಚರ ತಂಗೆಮ್ಮಾ

ಎಚ್ಚರ ತಂಗೆಮ್ಮ ಎಚ್ಚರ ಎಚ್ಚರ
ಹುಚ್ಚರ ಜಗದೊಳಗಿರು ಎಚ್ಚರ
ಕಚ್ಚೆ ಕಟ್ಟದ ಜನರಿಂದಿರು ಎಚ್ಚರ
ಮೆತ್ತನೆ ಮಾತುಗಳಿಂದಿರು ಎಚ್ಚರ

ಸೆಂಟು ಬೂಟು ಗಳಿಂದಿರು ಎಚ್ಚರ
ಸೂಟು ಸೋಕಿಗಳಿಂದಿರು ಎಚ್ಚರ
ಬೈಕು ಕಾರು ಗಳಿಂದಿರು ನಿ ಎಚ್ಚರ
ಅವರ ಬಣ್ಣದ ಮಾತಿಂದರು ಎಚ್ಚರ

ಸಾಲ ಸೋಲ ಗಳಿಂದಿರು ನಿ ಎಚ್ಚರ
ಸಂತಾನ ಸಾಕುವುದರಲ್ಲಿರಲಿ ಎಚ್ಚರ
ಹುಚ್ಚು ಮನಸಿಂದಿರು ನೀನು ಎಚ್ಚರ
ಪತಿ ಸೇವೆಯಲ್ಲಿರಲಿ ನಿನಗೆ ಎಚ್ಚರ

ಹೊರಗಡೆಯ ಕೆಲಸದಲ್ಲಿರಲಿ ಎಚ್ಚರ
ಬಾಡಿಗೆ ಅನ್ನಂದಿರಿಂದರಲಿ ಎಚ್ಚರ
ಒಳಗಿರುವ ಮುಸುಕಿಂದಿರು ಎಚ್ಚರ
ಸಮಯ ಸಾದಕರಿಂದಿರು ನಿ ಎಚ್ಚರ


ನಿನ್ನತನವನ್ನೆಲ್ಲ ಬಿಟ್ಟು ಕೊಟ್ಟು ತಂಗಿ
ನಿನಗಾಗಿ ಕಾದಿಹವು ಅದೆಷ್ಟು ಮಂದಿ
ಅಗದಿರು ನೀನು ಮುಂದೆ ಚಿಂದಿ ಚಿಂದಿ
ಲೋಕಪಾಲಕನ ಮುಂದೆ ಬಿಂದು ಎಂದೆ




- Kalmesh Badiger

09 Mar 2024, 06:37 am
Download App from Playstore: