ಬಿಸಿಲು...
ಸೂರ್ಯನ ಕಿರಣಗಳು
ಮಾಡಿವೆ ಭೂಮಿ ಮೇಲೆ ದಾಳಿ..
ಬಿಸಿಲಿನ ಬೇಗೆ ತಾಳದೆ
ಕಾದು ಹೋಗಿದೆ ತಣ್ಣನೆ ಗಾಳಿ..
ರಣ ಬಿಸಿಲಿನ ಕೋಪಕ್ಕೆ !
ಕರಗಿದೆ ಹೆಣ್ಣಿನ ಎದೆ ಮೇಲಿನ ತಾಳಿ..
ನಡುಗುತ್ತಿವೆ ಪ್ರಾಣಿ ಪಕ್ಷಿಗಳು
ನೋಡಿ ಬೇಟೆಯಾಡೋ ಬಿಸಿಗಾಳಿ...
ಸೂರ್ಯೋದಯವನ್ನು ನೋಡಲು
ಕಾದುಕುಳಿತಿದ್ದೆ ಚಳಿಗಾಲದಲ್ಲಿ.!
ಸೂರ್ಯಾಸ್ತನಾದರೆ ಸಾಕು ಎಂದು
ಬೇಡಿಕೊಳ್ಳುವೆ ಈಗ ಆ ಭಗವಂತನಲ್ಲಿ.!
ಬಟ್ಟೆ ಒಣಗಿದರೆ ಸಾಕು,
ಡ್ಯೂಟಿಗೆ ಹೋಗಬೇಕೆಂಬ ಚಿಂತೆ ಮಳೆಗಾಲದಲ್ಲಿ.!
ಬೆವರಿನ ಹೊಳೆಯಲ್ಲಿ ಮುಳುಗಿ
ಬಿಸಿಲಿನ ಧಗೆಯಲ್ಲಿ ಒಣಗಿರುವೆ ಈ ಬೇಸಿಗೆಯಲ್ಲಿ.!
ಕಾಡು ಬೆಳೆಸಿ, ಮುಂದಿನ ಪೀಳಿಗೆ ಉಳಿಸಿ,
ಕೆರೆಗಳನ್ನ ತೊಡಿಸಿ, ಪ್ರಾಣಿ ಪಕ್ಷಿಗಳ ದಾಹ ತೀರಿಸಿ,
ಗಿಡಮರಗಳಿಂದ ಕಾಡು, ಕಾಡಿಂದ ನಾಡು,
ಕಾಡಿಲ್ಲದಿದ್ದರೆ ಕಷ್ಟವಾಗುವುದು ಜನರ ಪಾಡು...
✍️ ತಿಮ್ಮಪ್ಪ
- Zandu Jan
04 Mar 2024, 01:27 am
Download App from Playstore: