ಪ್ರೀತಿ...
ಪ್ರೀತಿ ಇದೊಂದು ಹೆಸರ? ಖಾಯಿಲೆನ? ಜೀವನನ? ಅಥವಾ ಸಿಹಿಯಾದ ಭಾವನೆನ...!
ಪ್ರೀತಿ ಬಲೆಗೆ ಬಿದ್ದು ಹೊರಬಂದವರೆಷ್ಟೋ..?
ಅದರಲ್ಲಿ ಸಿಕ್ಕಿಬಿದ್ದು ಸತ್ತವರ ಸಂಖ್ಯೆ ಇನ್ನೆಷ್ಟೋ..?
ಇದರಿಂದ ಲಾಭ ಉಲ್ಲವರೆಷ್ಟೋ,
ನಷ್ಟ ಅನುಭವಿಸದರಿನ್ನೆಷ್ಟೋ,.?
ಪ್ರೀತಿ ಸಮುದ್ರವನ್ನು ದಾಟಿಸುವ ಶಕ್ತಿಯು ಹೌದು,
ಪರ್ವತ ಶಿಖರವನ್ನು ಚುಮ್ಮಿಸುವ ಪ್ರೇರಣೆಯೂ ಹೌದು,
ಕೋಟ್ಯಾಧಿಪತಿಯನ್ನು ರೋಡಿಗೆ ತರುವ ದರಿದ್ರನು ಹೌದು,
ಭಿಕ್ಷುಕನನ್ನು ಕೊಟ್ಯಧಿಷನಾಗಿ ಮಾಡುವ ಶಕ್ತಿಯು ಹೌದು,
ಪ್ರೀತಿಯ ಕಟು ನೀತಿಗೆ ಮುರಿದುಹೋದ ಸಂಬಂಧಗಳೆಷ್ಟೋ,
ಪ್ರೀತಿಯ ಶಾಪಕ್ಕೆ ಮಸಣ ಕಂಡ ಹೆಣಗಳೇಷ್ಟೋ,
ಪ್ರೀತಿಯ ಆಟಕ್ಕೆ ಬೀದಿ ಬೀದಿ ತಿರುಗುತ್ತಿರೋ ಪ್ರೆಮಿಗಳೇಷ್ಟೋ,
ಪ್ರೀತಿಯ ಹುಚ್ಚಿಗೆ ಅಪ್ಪ ಅಮ್ಮಂದಿರು ತಿಂದ ನೋವುಗಳೇಷ್ಟೋ...
ಪ್ರೀತಿ ಇದೊಂದು ಕಾಲ್ಪನಿಕ ಸುಮಧುರ ಭಾವನೆ,
ನೆತ್ತಿಗೆ ಏರಿಸಿಕೊಂಡರೆ ಜೀವನ ಕಾಣುವುದು ಕೊನೆ,
ಜೀವನದ ಭಾಗವಾಗಿ ಸ್ವೀಕರಿಸಿದರೆ ಬಾಳಗುವುದು ಹಾಲು ಜೇನೆ,
ಪ್ರತಿ ಒಬ್ಬರಲ್ಲು ಪ್ರೀತಿ ಹಂಚಿದರೆ ಮೆಚ್ಚುವನು ಆ ಭಗವಂತನೇ,
✍️ ತಿಮ್ಮಪ್ಪ
- Zandu Jan
04 Mar 2024, 01:26 am
Download App from Playstore: