ಬರವಿಲ್ಲದಾ ಚಿಲುಮೆ.....
ನಿನ್ನ ಕಣ್ಣ ಸನ್ನೆ,
ನನ್ನ ಕಾಡಿದೆ ಹೆಣ್ಣೇ....
ನಿನ್ನ ಹೊಳೆವ ಕಂಗಳು,
ನಾಚಿಸಿವೆ ಬೆಳದಿಂಗಳು,
ಕೆಂಪಾದ ಆ ಕೆನ್ನೆ,
ಬೇಡವಾಗಿಸಿದೆ ಬೆಣ್ಣೆ,
ಅಧರವದೋ ಬಲು ಮಧುರ,
ಸುಮಧುರ ಮನೋಹರ,
ನೀ ನಕ್ಕಾಗ ನನ್ನ ಮನ,
ಪರಿಮಳ ಭರಿತ ಹೂ ಬನ,
ನಿನ್ನ ಕುಡಿ ನೋಟದಾ ಸೆಳೆತ,
ಕದ್ದೋಯ್ಯುತಿದೆ ನನ್ನೆದೆಯ ಬಡಿತ,
ಇನ್ನು ಅರಿಯಲಾರೆಯಾ ನೀನು ನನ್ನ ಮನದ ಇಂಗಿತ..
ಮರೆತಾದರೂ ಅರಿ ನೀ ಒಮ್ಮೆ,
ನನ್ನೊಲುಮೆ ಇಹುದು ಬರವಿಲ್ಲದಾ ಚಿಲುಮೆ...
----- tippu -----
- tippu
28 Feb 2024, 11:03 pm
Download App from Playstore: