"ಹೆಣ್ಣು"

ಬಾಳಿನ ಆಶಾ ಕಿರಣ ಇವಳು,
ಸೌಂದರ್ಯದ ಮಹಾರಾಣಿ,
ಜೀವನೋಲ್ಲಸದ ಪ್ರತಿಭೆ ,
ಬದುಕಿನ ನಂದಾದೀಪ ಈಕೆ ...

ವಿದ್ಯೆಯ ಒಡತಿ.. ಭಾಳಿನ ಗೆಳತಿ,
ಮಾತಿನ ಮಲ್ಲಿ..ಹೃದಯಗಳ ಕಳ್ಳಿ,
ಭಾವನೆಗಳ ಮಹಾಪೂರ ಇವಳು,
 ಪ್ರತಿ ನೋವಿಗೆ ಸ್ಪಂದಿಸುವಾಕೆ...

ಕುಡಿ ನೋಟದಲ್ಲಿಯೇ ಹಲವು ಮನಸ್ಸುಗಳ ಗೆಲ್ಲುವಕೆ,
ಪುಟ್ಟ ನಗುವಿನಿಂದಲೇ ಮರಳುಗೊಳಿಸುವಾಕಿ,
ತನ್ನ ತನವನ್ನು ಬಿಟ್ಟು ಕೊಡದ ಸ್ವಾರ್ಥಿ,
ತನ್ನವರಿಗಾಗಿ ಮಿಡಿಯುವ ಹೃದಯವಂತೆ....

ಸಣ್ಣ ಪುಟ್ಟ ವಿಷಯಗಳಲ್ಲಿ ಖುಷಿಪಡುವಕೆ,
ನೋವನ್ನು ತನ್ನಲ್ಲಿಯೇ ಬಚ್ಚಿಡುವ ಸಾಧಕಿ,
ಸ್ಪೂರ್ತಿಯ ಮಹಾನ್ ಕಲಾವಿದೆ,
ಸದಾ ಚಟುವಟಿಕೆಯಿಂದ ಇರುವ ಉತ್ಸಹದ ಚಿಲುಮೆ... 

ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಮನದನ್ನೆಯಾಗಿ,
ಜೀವನ ಸಾಗಿಸುವ ಸಹನಾಮೂರ್ತಿ,
ಪ್ರತಿಯೊಂದು ಕ್ಷಣವೂ, ಪ್ರತಿ ದಿನವೂ ವಿಶೇಷ ಇವಳು,
ಸುಖದಲ್ಲಿಯೂ, ದುಃಖದಲ್ಲಿಯೂ ಕೈ ಹಿಡಿದು ಮುನ್ನಡೆಸುವಲಿವಳು.....

✍️...Love Kasthury

- kasthury k

23 Feb 2024, 05:05 pm
Download App from Playstore: