ನನ್ನ ಸ್ನೇಹಿತರು
ಸ್ನೇಹ ಎಂದರೇನು
ಸ್ನೇಹದಲ್ಲಿ ಮೋಸವಿಲ್ಲವೇನು
ನಂಬಬಹುದೇ ಕಣ್ಮುಚ್ಚಿ ಸ್ನೇಹವನು
ಹೇಳಬಹುದೇ ಮನದ ನೋವನು
ಅನುಸರಿಸಬಹುದೇ ಅವರ ಸಲಹೆಯನು....
ನನಗಿರುವುದು ಬೆರಳಣಿೆಯಕೆಯಷ್ಟು ಸ್ನೇಹಿತರು
ಅವರೆಲ್ಲ ಕಲ್ಲಲ್ಲಿ ಹೆಕ್ಕಿ ತೆಗೆದಿರುವ ಮುತ್ತುಗಳು
ಅವರನ್ನು ನಂಬಿರುವೆ ಕಣ್ಮುಚ್ಚಿ
ಅವರಲ್ಲಿ ಹೇಳಿರುವೆ ಎಲ್ಲವ ಮನಬಿಚ್ಚಿ...
ಹಿಂದೊಂದು ಮುಂದೊಂದು ಮಾತನಾಡದವರು
ಬೇರೆಯವರೊಂದಿಗೆ ನನ್ನನು ಹಿಂಜರಿಯದವರು
ನನ್ನ ಸಂತೋಷದಲ್ಲಿ ಖುಷಿ ಕಾಣುವವರು
ಕಷ್ಟದ ಸಮಯದಲ್ಲೂ ಜೋತೆಯಿರುವವರು
ನನ್ನೆಲ್ಲಾ ಚೇಷ್ಟೆಗಳನ್ನು ಸಹಿಸಿಕೊಂಡವರು
ಅವರೂ ಅವರಾಗೆ ನನ್ನೊಡನೆ ಇರುವವರು
ನನ್ನವರು ನನ್ನ ಜೊತೆ ಇರುವವರು
ನನ್ನ ಸ್ನೇಹಿತರು
- HTK
20 Feb 2024, 12:33 pm
Download App from Playstore: