ಒಂದು ಕ್ಷಣದ ಕಷ್ಟ-ಸುಖ

ಕಷ್ಟ ಯಾರಿಗಿಲ್ಲ ಹೇಳಿ
ಯಾವ ಕಷ್ಟತಾನೆ ಬರುವುದು ನಮ್ಮ ಕೇಳಿ
ಇದರಿಂದಾಗಿ ಆಗಾಗ ಆಗುತೈತೆ ನಮ್ಮ ಮನಸ್ಸಿನ ಮೇಲೆ ದಾಳಿ
ಆದರೂ ಉಸಿರಾಡುತ್ತಿದ್ದೇವೆ ಆಮ್ಲಜನಕ ಎಂಬ ಗಾಳಿ

ಅಳು ವೆಂಬುದು ಬೇಸರ ಎಂಬುದರ ರೂಪ
ಮನದಲ್ಲಿ ಅಡಗಿದೆ ನೋವೆಂಬ ತಾಪ
ಇದೆಲ್ಲಾ ನಾನು ಯಾವ ಜನ್ಮದಲ್ಲಿ ಮಾಡಿದ ಪಾಪ
ಈಗ ಅನುಭವಿಸುತ್ತಿದ್ದೇನೆ ಅದರ ಶಾಪ

ನಗು ಎಂಬುದು ಜೀವನದ ಒಂದು ಕ್ಷಣ
ಆ ಒಂದು ಕ್ಷಣಕ್ಕಾಗಿ ನಮ್ಮೆಲ್ಲರ ಪಣ
ಆದರೆ ನಗುವನ್ನು ಕೊಂಡುಕೊಳ್ಳಲು ನಮ್ಮಲ್ಲಿಲ್ಲ ಹಣ
ಆದರೂ ಖುಷಿಯಾಗಿದ್ದೇವೆ ಕಾರಣ ನಮ್ಮ ತಂದೆ ತಾಯಿಯ ಋಣ

- HTK

13 Feb 2024, 09:12 pm
Download App from Playstore: