ನಲ್ಮೆಯ ಸಖಿ

ಓ ಹೊನಲೇ ದಟ್ಟನೆಯ ಕಾನನದೊಳಗೆ ನೀ ಅವಿತಿರಲು,
ನಾ ಬೆಟ್ಟವ ಸುತ್ತಿ ಬರುವೆ ನಿನ್ನ ನೋಡಲು,,
ನೀ ಎಂದರೆ ಸದಾ ನನ್ನೆದೆಯಲ್ಲಿ ಹೊಸ ಬಗೆಯ ಅಮಲು,
ನೀ ಹರಿಯುವ ಇಂಪಾದ ಶಬ್ದದ ಸ್ವರವೇ ನನ್ನೆರಡು ಕಿವಿಗೆ ಮಿಗಿಲು.....!


ನನ್ನೊಳಗೆ ಮರೆಮಾಚಿದೆ ಅವ್ಳ
ಮುಗ್ದ ನಗುವೊಂದು,
ಪುಟದ ಹಾಗೆ ತೆರೆಯಲಾಗದು ಅವಳ ಮನಸ್ಸನೆಂದು,,
ಅವಳೊಂದು ನನ್ನೊಳಗಿನ ಮಂದಿರದ ಕೇಂದ್ರ ಬಿಂದು,
ಆದರೂ ಅವಳ ಹೆಸರೇ ಕವಿದಿದೆ ನನ್ನ ಹೃದಯದಲಿ ಎಂದೆಂದೂ......!!


ನಿತ್ಯವೂ ನೆನಪಾಗಿ ಕಾಡುವುದು ಗೆಳತಿ ನಿನ್ನ ಧ್ವನಿ,
ಆದರೂ ಮಾತಾಡಲು ನೀನೇಕೆ ಆಗಿರುವೆ ಇಷ್ಟೊಂದು ಮೌನಿ,
ನನ್ನ ಸಖಿಯ ಸ್ವರ ಕೇಳದೆ ನಾನಾಗಿರುವೆ ನಿನ್ನ ಧ್ಯಾನಿ,
ಸದಾ ಗೆಳತಿ ನಾನೆಂದು ನಿನ್ನ ಪ್ರೀತಿಗೆ ಮುಗ್ದ ಅಭಿಮಾನಿ.....!!!



✍️...... ಅಭಿಷೇಕ್ ಟಿ ಎ

- Abhishek T A

11 Feb 2024, 07:55 am
Download App from Playstore: