ಮನಸ್ಸಿನ ಮಾತು

ಮನಸ್ಸು ಕಸಿವಿಸಿಯಿಂದ ಕೇಳಿತ್ತು
ನೀನು ಏನು ಮಾಡಬೇಕೆಂದಿರುವೆ ಎಂದು
ಏನೂ ತಿಳಿಯದ ನಾ ನುಡಿದೆ
ಜೀವನದಲ್ಲಿಲ್ಲದ ಗುರಿಯ ಮುಟ್ಟಬೇಕೆಂದು

ಕಿರುನಗೆಯ ಬೀರಿ ಮನಸ್ಸು ಕೇಳಿತ್ತು
ನೀನು ಏನು ಮಾಡಿರುವೆ ಇಂದು ಎಂದು
ಏನೂ ಬೇಡವೆಂದು ಕೈಚೆಲ್ಲಿ ಕುಳಿತಿದ್ದ ನಾ ನುಡಿದೆ
ನನ್ನವರಿಗಾಗಿ ಬದುಕಿರುವೆ ನಾನಿಂದು

ಭವಿಷ್ಯವ ನೆನೆದು ಮನಸ್ಸು ಹುರುಪಿನಲ್ಲಿ ಹೇಳಿತ್ತು
ನಾ ಇರುವೆ ನಿನ್ನ ಜೊತೆಯಲಿ ಎಂದೆಂದು
ಮನ ನೊಂದು ನಾ ನುಡಿದೆ
ನಿನಗೆ ಜಾಗವಿಲ್ಲ ನನ್ನಲಿಂದು

ಸೋತ ಮನಸ್ಸು ಹೇಳಿತ್ತು
ಭೂತಕಾಲದ ಭೂತ ಹೊಕ್ಕಿದೆ ನಿನ್ನಲ್ಲಿಂದು
ಅದ ಕೇಳಿದ ನಾ ನುಡಿದೆ
ಭೂತದ ಭಯಕ್ಕೆ ಅಡಗಿ ಕುಳಿತಿರುವೆ ನಾ ಇಂದು

ಪ್ರೋತ್ಸಾಹಿಸುವ ಭರದಲ್ಲಿ ಮನಸ್ಸು ನುಡಿದಿತ್ತು
ಭೂತದ ಭಯಕ್ಕೆ ಬೇದರಿದರೆ ನೀ ಇಂದು
ನನ್ನ ನೀ ಕಳೆದುಕೊಳ್ಳುವೆ ಎಂದೆಂದು

ವಾಸ್ತವಕ್ಕೆ ಮರಳಿದ ನಾ ನುಡಿದೆ
ನಿ ನನ್ನೊಂದಿಗೇ ಇರುವಾಗ ಭಯ ತಾನೇ ಏನು ಮಾಡಿತೆಂದು
ಕುತಲ್ಲಿಂದ ಎದ್ದು ನಡೆದೇ ಭವಿಸ್ಯವ ನೋಡಲೆಂದು...

- HTK

08 Feb 2024, 02:15 pm
Download App from Playstore: