ಈ ದಿನ
ಕಳೆದಿರುವೆ ಈ ದಿನವ ಸಮಯದ ಜೊತೆಯಲಿ
ಏನೂ ಮಾಡದೆ ಏನೂ ತೋಚದೇ
ಕುಳಿತಿರುವೆ ಒಬ್ಬಳೆ ಸುಮ್ಮನೆ ಮನೆಯಲಿ
ಖಾಲಿ ನೆನಪುಗಳ ಜೊತೆಯಲಿ
ಪ್ರತಿ ಕ್ಷಣವೂ ನೆನಪಿಸಿದೆ
ಸಮಯವು ಉರುಳುತ್ತಿದೆ ಎಂದು
ನಾ ತಾನೇ ಏನು ಮಾಡಲಿ
ಮನಸ್ಸು ಮರುಗಿದೆ ಸಮಯವ ತಡೆಯುವ ಶಕ್ತಿ ನನ್ನಲಿಲ್ಲವೆಂದು
ನನ್ನದೇ ಬಿಂಬ ನನ್ನನೆ ಪ್ರಶ್ನಿಸಿದೆ
ಕಳೆದಿರುವ ಸಮಯದಲಿ ನೀ ಏನೂ ಮಾಡಿರುವೆ ಎಂದು
ಏನು ಹೇಳಬೇಕೆಂದು ತಿಳಿಯದೆ ಕುಳಿತಿರುವೆ ನಾ ಇಂದು
ನಸುನಕ್ಕು ಮನ ನುಡಿದಿದೆ...
ನಿನಗಿನ್ನು ಸಮಯವಿದೆ, ಮಾಡು ನೀ ಇಷ್ಟಪಟ್ಟಿದ್ದಿಂದು.
- HTK
08 Feb 2024, 11:32 am
Download App from Playstore: