ನನ್ನವನ ಪ್ರೇಮ

ಕಷ್ಟ ಎಂಬ ತಂಗಾಳಿಯಲ್ಲಿ
ದುಃಖ ಎಂಬ ಅಂಗಳದಲ್ಲಿ
ಮರೆಯಾಗದಿರು ಈ ನನ್ನ ಮನಸ್ಸಿನಲ್ಲಿ
ಮೊದಲ ಮಾತು ಮೊದಲ ಮುತ್ತು
ಕೊನೆಯವರೆಗೂ ಮರೆಯಾಗದು
- ನೀ ಎಂದೆಂದೂ ದೂರವಾಗದಿರು -

ಮೊದಲೇ ದಿನವೇ ತಿಳಿದೇ ನೀ ನನ್ನವನೆಂದು
ದೂರವಾಗದಿರಲು ನಿರ್ದರಿಸಿದೆ ನೀ ನನ್ನವನೆಂದು.
ಕೈ ಬಿಡದಿರು ನಿನ್ನ ಉಸಿರಿರುವರೆಗೂ
ಮೋಸ ಮಾಡಲಾರೆ ನನ್ನ ಜೀವಿರುವರೆಗೂ.
ಬಿಟ್ಟು ಹೋಗದಿರು ಓ ನನ್ನ ಪ್ರೇಮಿಯೇ
ಕೈ ಮುಗಿದು ಬೇಡುವೆ ನಿನ್ನನು.

-ನೀ ಎಂದೆಂದೂ ದೂರವಾಗದಿರು-

ಎಲ್ಲರಂತಲ್ಲಾ ನನ್ನವನು ಎಲ್ಲರಿಗಿಂತಲೂ ದೊಡ್ಡವನು.
ಎಂದಿಗೂ ಮರೆಯಲಾರೆ ಈ ನಿನ್ನ ಪ್ರೀತಿಯನ್ನು.
ಬೀಸುವ ಗಾಳಿಯಲ್ಲಿ ಹಾರಿ ಹೋಗದಿರು
ಮತ್ತೊಬ್ಬರ ಮಾತಿಗೆ ಕಿವಿ ಕೊಡದಿರು.
ಮನೆತನಕ ಬಂದವರಿಗೆ ಹಾಗೆ ಕಲಿಸಬೇಡ
ಕೊನೆಗೆ ಬರುವುದು ಪರಸ್ತಿತಿ ಎಂದು ಮರೆಯಬೇಡ.
-ನೀ ಎಂದೆಂದೂ ದೂರವಾಗದಿರು-

ನನ್ನವನು ಮನಸ್ಸಿನಲ್ಲಿ ಅಪರಂಜಿ
ಹೊರಗೆ ನಡೆಯುವನು ಎಲ್ಲರಿಗೆ ಅಂಜಿ
ಮನಸ್ಸು ಮಾತ್ರ ಶುದ್ಧ ಬಂಗಾರ.
ಕಷ್ಟವೇ ಇರಲಿ, ಸುಖವೇ ಇರಲಿ ಹಂಚಿಕೊಳ್ಳುವ ಮನಸ್ಸು.
ಅವನು ಅಂದುಕೊಂಡ ಕನಸು ಆಗಲಿ ನನಸು.
- ನೀ ಎಂದೆಂದೂ ದೂರವಾಗದಿರು-

ಕೊನೆವರೆಗೂ ನಿನ್ನ ಜೊತೆ ಬಾಳಲು ಇಷ್ಟ
ಆದರೆ ಸಮಸ್ಯಗಳಿಗೆ ಎದುರಾಗಿರುವೆ
ಇದೇ ನನಗೆ ಕಷ್ಟ.
ಕೆಟ್ಟದ್ದಕಿಂತ ಜಾಸ್ತಿ ಒಳ್ಳೆಯದನ್ನು ಬಿತ್ತಿದೆ.
ಎಲ್ಲ ಕಷ್ಟ ಸುಖ ಹಂಚಿಕೊಂಡೆ.
ಇದೇ ನನ್ನವನ ಒಳ್ಳೆಯ ಮನಸು
- ನೀ ಎಂದೆಂದೂ ದೂರವಾಗದಿರು-

ನನ್ನವನ ಮನಸ್ಸು ಅತಿ ಚಂದ
ದಸರಾ ಬೊಂಬೆಯ ಹಾಗಿದೆ ಅವನ ಅಂದ .
ಪ್ರತಿಯೊಂದು ಜೀವಿಯೂ ಕೂಡ ಕರೆದು ಹೇಳುವುದು ನಿನ್ನವನು ನಿನಗೇ ಸಿಗುವ ನೆಂದು.
ನಂಬಿಕೆ ಇಟ್ಟಿರುವೆ ಅವನು ನನ್ನವನೆಂದು.
ಕಳೆದು ಹೋಗದಿರು ನೀ ಎಂದೆಂದೂ.
-ನೀ ಎಂದೆಂದೂ ದೂರವಾಗದಿರು-

❤I LOVE YOU FOREVER ❤

- bhagyashree biradar

08 Feb 2024, 09:30 am
Download App from Playstore: