ಕನಸು
ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
ಬಣ್ಣ ಬಣ್ಣದ ಆಸೆಗೆ
ಜೀವ ಕೊಡುವ ಕಾತುರ
ಬಾನಾಚೆಯ ಜಗತ್ತಿಗೆ
ಏಣಿ ಹಾಕುವ ಹಂಬಲ
ಮುಸ್ಸಂಜೆಯ ತಂಗಾಳಿಗೆ
ಮನವೊಡ್ಡುವ ತುಡಿತ
ಇರುಳಿನ ನಿಶ್ಚಲತೆಗೆ
ಮಾರುಹೋಗುವ ಆಶಯ
ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
- ವರ್ಷಿಣಿ
- Varshini Hebbar
06 Feb 2024, 12:02 pm
Download App from Playstore: