ಮತದಾನದ ಮಹತ್ವ
ನಾಡಿಗಾಗಿ ಒಂದು ಮತ
ನಡೆಯಿತರಲಿ ಅವಿರತ
ಅದರಲಿದೆ ನಮ್ಮ ಹಿತ
ಅದುವೇ ನಮ್ಮ ಬಾಳ ರಥ.
ಒಂದು ಒಂದು ಕೂಡಿದರೆ ಆಗುವುದು ಶತ
ಶತ ಶತಮಾನಗಳಿಂದಲೂ ಅದುವೇ ಪಥ
ಈ ಪಥದೊಳಗೆ ಜಯ ನಿಶ್ಚಿತ
ಅರಿತು ಚಲಾಯಿಸಿ ನಿಮ್ಮ ಮತ.
ಮತದಾನ ಎಂಬ ಹಬ್ಬ
ಮನೆಮನೆಗೆ ಬಂದ ಸಗ್ಗ
ಮತದಾರರಿಗೆ ಬಲು ಹಿಗ್ಗ
ಯಾವ ಮತವು ಅಲ್ಲ ಅಗ್ಗ
ಮತದಾನ ಬಲು ಚಂದ
ಸಾಲಾಗಿ ನಿಲ್ಲುವುದು ಇನ್ನು ಅಂದ
ವ್ಯಕ್ತಿ ಪರಿಚಯ ಸೌಗಂಧ
ಮತ ಚಲಾವಣೆಯೇ ಶ್ರೀಗಂಧ.
ರಚನೆ : ಶ್ರೀ ಎ ಆರ್ ಹಂಚಿನಾಳ
ಶಿಕ್ಷಕರು ಕೆ ಪಿ ಎಸ್ ಮುಗಳೊಳ್ಳಿ
- Arjunraddi Hanchinal
03 Feb 2024, 02:24 pm
Download App from Playstore: