ಕವನ ಶ್ರೀರಾಮ.
ಕಮಲ ನಯನನ ಪ್ರತಿರೂಪವೇ ಅಯೋಧ್ಯೆಗೆ ಬೆಳಕು,
ಕೌಸಲ್ಯಳ ಗರ್ಭದಿ ಅರಳಿದ ಹೂ ಬಲು ಚುರುಕು.
ಸಂಭ್ರಮ ತಂದ ಗಿನಿಯೇ ಅರಮನೆಗೆ ಮುದ್ದು,
ವರ್ಣಿಸಲಾಗದ ಬಾಲ್ಯ ಶ್ರೀ ರಾಮನದ್ದು.
ಜ್ಞಾನದ ಗಣಿಯಾಗಿ ವಶಿಷ್ಠರ ಶಿಷ್ಯ,
ಅಘೋಚರ ವಿಸ್ಮಯಗಳ ವೀಕ್ಷಿಸಿ ಅರಿಯುವ ರಹಸ್ಯ.
ಅಹಲ್ಯ ಶಾಪಕ್ಕೆ ಮುಕ್ತಿ ನೀಡಿತು ಯುವರಾಜನ ಸ್ಪರ್ಶ, ಪದ್ಮನಾಭನ ದರ್ಶನ ತಂದಿತು ಶಬರಿಗೆ ಹರ್ಷ.
ಜನಕನಿಗೆ ಭೂಮಿ ಕೊಟ್ಟ ಸೊಬಗೆ ಸೀತಾ,
ಪರಾಕ್ರಮಿ ಪತಿಗಾಗಿ ಹಿಡಿದಳು ಗೌರಿ ವ್ರತ.
ಶಿವ ಧನುಷ್ ಎತ್ತಿಲಿಸಿದ ಮಹಾರಾಜಗೆ,
ಜಾನಕಿಯ ಹಾರ ಸೇರಿತು ಲೋಕವನ್ನಾಳುವ ಸಿರಿಗೆ.
ತಂದೆಯ ಮಾತನು ಪಾಲಿಪ ನಾಗಿ,
ರಾಜ್ಯವ ತೊರೆದ ತಮ್ಮನಿಗಾಗಿ.
ರಾಮ ನಾಮ ಮಂತ್ರದಲ್ಲಿ ಮೋರೆಯುತಿದೆ ಮಾರುತಿಯ ಮಹಿಮೆ,
ಮನದ ಕಣ ಕಣ ದೊಳ್ ಹರಿಸುತ್ತಿದೆ ಭಕ್ತಿಯ ಚಿಲುಮೆ.
ಸರ್ವ ತ್ಯಾಗಕ್ಕೂ ಸಿದ್ಧ ಶ್ರೀ ರಾಮ,
ಭೂಮಂಡಲದ ಹೃದಯಗಳು ಜಪಿಸುತ್ತಿವೆ ಸದಾ ರಾಮ ನಾಮ.
- nagamani Kanaka
23 Jan 2024, 07:47 am
Download App from Playstore: