ಕವನ ಶಾಲೆ...
ಮಕ್ಕಳ ಜ್ಞಾನ ಮಂದಿರ ಶಾಲೆ,
ಅಲ್ಲಿ ಮಕ್ಕಳೇ ಅರಳುವ ಹೂ ಮಾಲೆ.
ಸಹಪಾಠಿಗಳೊಂದಿಗೆ ಕೂಡಿ ಆಡುವರು ಅಂಗಳದಲ್ಲೆ.
ಸಹ ಭೋಜನ ಸವಿಯುವರು ಸಂಭ್ರಮದಲ್ಲೇ.
ಗುರುಗಳು ಹೇಳುವರು ಪಾಠ,
ಮಕ್ಕಳು ಕಲಿಯುವರು ಆಡುತ್ತಾ ಮೋಜಿನಾಟ.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಿನ್ನರ ಕೂಟ,
ನಾ ಮುಂದೆ, ತಾ ಮುಂದೆಂದು ಸೆಣಸಾಡಿ ಮುಗಿಸುವರು ಜಗಳದ ಜೂಟಾಟ.
ಶಾಲೆಯಲ್ಲಿ ಶನಿವಾರ ಮಾಡುವೆವು ಯೋಗ,
ಧ್ಯಾನ, ಮಕ್ಕಳಿಗೆ ಕಲಿಸುವುದು ಸನ್ಮಾರ್ಗ.
ಮಕ್ಕಳ ಸ್ನೇಹ ಯುದ್ಧ ಬದುಕಿಗೆ ಶಾಲೆಯೇ ವೈಭೋಗ,
ಭವಿತಾ ರಾಷ್ಟ್ರಕ್ಕೆ ಶಿಲ್ಪಿಗಳಾಗುವ ಪ್ರಜೆಗಳದ್ದೇ ಶುಭ ಯೋಗ.
- nagamani Kanaka
12 Jan 2024, 04:00 pm
Download App from Playstore: