ಕನ್ನಡಿಗನಾಗಿ ಕನ್ನಡ ಕಲಿ

ನಮ್ಮ ಕರ್ನಾಟಕವಾಗಲಿ ಭಾರತಾಂಬೆಯ ಗರ್ಭಗುಡಿ |
ನಮ್ಮ ಕನ್ನಡವಾಗಲಿ ಕರ್ನಾಟಕದ ಗರ್ವ ನುಡಿ ||

ಕನ್ನಡವ ಸರಿಯಾಗಿ ಕಲಿತು ಬಾ ಮಗು;
ಆಗ ನೋಡು ಕನ್ನಡಾಂಬೆಯ ಮುಖದ ನಗು.
ಕನ್ನಡಕೆ ನೀ ಅಭಿಮಾನದಲಿ ಬಾಗು;
ಯಶಸ್ವಿಯ ಹಾದಿಯಲ್ಲಿ ಕನ್ನಡಿಗನಾಗಿ ನೀ ಸಾಗು.

ಕನ್ನಡ ಸಾಹಿತ್ಯದ ಸಿಹಿ ಸವಿದು,
ಕನ್ನಡ ಅಭಿಮಾನದ ಮೋಡ ಕವಿದು,
ಕನ್ನಡ ಮಾತುಗಳ ಹೊಳೆ ಹರಿದು,
ಕನ್ನಡಾಂಬೆಯ ಒಡಳಿಗಿಳಿದು ನೀ ಕನ್ನಡಿಗನಾಗು.

- Sushant Naik

08 Jan 2024, 08:13 pm
Download App from Playstore: