ಕಾಯಕ ಯೋಗಿ ಲೂಯಿಸ್ ಬ್ರೈಲ್.

ಅಂಧರ ಕಲಿಕೆಗೆ ಬ್ರೈಲ್  ಲಿಪಿಯು ಸೃಷ್ಟಿಯಾಗಿದೆ, 

ಬಾಲಕ ಸಾಹಸಿಗರ ಸಾಲಿಗೆ  ಲೂಯಿಯ ಹೆಸರು ಸೇರಿದೆ. 

ಅನುಕರಣೆಯ  ಮೋಜಿನ ಆಟ, 

ಕಂದನ ದೃಷ್ಟಿಯ ನುಂಗಿದ ಮುಳ್ಳಿನ  ಚಿಮೂಟ. 

ಸುಳಿವರಿಯದ ಮುಗ್ಧ ಪೋರನ ಬದುಕಿಗೆ, 

ತಿಳಿಸಿದರು ತಂದೆ ಸುಗಮ ಸೂತ್ರಗಳ ಮಗನ ಪ್ರಗತಿಗೆ. 

ಕ್ಲಿಷ್ಟ ಮಾರ್ಗದಿ ಪಡೆದರು ಲೂಯಿ ಶಿಕ್ಷಣ, 

ಸಕಲ ಶಾಸ್ತ್ರಗಳ ಅರ್ಜಿಸುವ ಅವರ ಬುದ್ಧಿ ತೀಕ್ಷಣ. 

ಲೂಯಿ  ವ್ಯಾಲಿಂತೀನ್ ಹಾಯ್ ವಿಶೇಷ ಶಾಲೆಯ ಪ್ರಾಧ್ಯಾಪಕರಾಗಿ, 

ಸುಸಜ್ಜಿತ ಬ್ರೈಲ್ ಲಿಪಿ ಶೋಧಿಸಿ ಬೋಧಿಸಿದ ಕಾಯಕ ಯೋಗಿ. 

ಕೊನೆಯವರೆಗೂ ಸಿಗಲಿಲ್ಲ ಲುಯಿಯ ಬ್ರೈಲ್ ಲಿಪಿಗೆ ಪ್ರೇರಣೆ, 

ಉರುಳಿದ   ಶತಮಾನದ ಲಿ ಆರೂ ಚುಕ್ಕಿಗಳ ಲಿಪಿಗೆ  ಲಭಿಸಿತು ಸರ್ಕಾರದ ಮನ್ನಣೆ. 

ಸರ್ವ ಭಾಷೆಯೊಳ್ ಅಂಧರಿಗೆ ವಿದ್ಯೆ ಕೊಡುವ ಲಿಪಿಯ ಸ್ಮರಣೆ, 

ಜನವರಿ ನಾಲ್ಕರ ವಿಶ್ವ ಬ್ರೈಲ್ ದಿನದ ಆಚರಣೆ.

- nagamani Kanaka

04 Jan 2024, 11:40 am
Download App from Playstore: