ಕವನ ಹೊಸ ವರ್ಷದ ಅನುಭವ.

ಅಮಾವಾಸ್ಯೆಯ ಕತ್ತಲೆ ಕಡಿದು ಜರುಗುತಿದೆ ಹೊಂಬೆಳಕು, 

ನಗುವಿನ ರಸಮಾಲಿಕೆಯಲ್ಲಿ ಜನರು ತಿನಿಸುವರು ಸಿಹಿ ಕೇಕು. 

ಕಲಾ ಸಿರಿಯನ್ನು ನೆನಪಿಸುತ್ತಾ ಕುಣಿಯುವರು ಮನುಜರು ಮೈಮರೆತು, 

ಭೋಜನ ಸವಿಯುತ ಪಿಸುಗುಡುವರು ನಿಟ್ಟುಸಿರ ಬಿಟ್ಟು ಹಳೆಯ ಘಟನೆಗಳ ಕುರಿತು. 

ಆಕಾಶ ದಿಟ್ಟಿಸಿ ಕೇಳುವೆವು ಸಂತಸದ ಸುಗಡು ನ ನಮ್ಮ ಬದುಕಲಿ ಹರಡಲೆಂದು, 

ಹೊಂಗನಸ   ಹೊತ್ತು ಈಜ ಬೇಕು ಹೊಳೆಯುವ ಮಿಂಚಂತೆ ಗುರಿ ಸೇರಲೆಂದು. 

ಹಳೆಯ ನೋವಿಗೆ ಕೊಡುವ ವಿರಾಮ, ಮುಂಜಾನೆಯ ಸೂರ್ಯೋದಯ ನಮ್ಮ ಬಾಳಿನ ಬಂಗಾರವಾಗಲಮ್ಮ.. 

24 ನೇ ಇಸವಿ ಮರೆಸಲಿ ನಮ್ಮೊಳಗಿನ ಹಾಗೆತನವ, 

ಅಶೋಕ ಮಹಾಶಯನಂತೆ ಪ್ರೀತಿಸುವುದ ಕಲಿಸಲಿ  ನಮ್ಮ ಸುತ್ತಲಿನ ಜನವ... 

ನಮ್ಮ ಹೃದಯದಿ ಕುಣಿಯುತಿರಲಿ ಸಹ ಬಾಳ್ವೆಯ ನರ್ತನ, 

ವರ್ತಿಸುವ ಮನ   ಕುಟುಕದಿರಲಿ ಕಚ್ಚುವ ಚೇಳನ್ನ....

ಉತ್ತಮರ ಸಾಲಲ್ಲಿ ನಾವು ಸಾಗುವ ಪ್ರಯತ್ನ ಮಾಡಿದರೆ, 

ಗೋಪುರದ ಅಂಚಲ್ಲಿ ಭಮಿಸುವುದು ನಮ್ಮ ನಾಮಾಂಕಿತ..... 

ಹತ್ತಿಯಂತೆ ಹಗುರವಾಗಿರಲಿ ನಮಗೆ ಹೊಸ ವರ್ಷದ ಅನುಭವ, 

ಚಲಿಸುವ ಮೋಡಗಳಂತೆ ತಂಪಾಗಿರಲಿ   ನಾವಿರುವ ವಾಸ್ತವ......

ಸರ್ವರಿಗೂ ಹೊಸ ವರ್ಷದ ಶುಭಾಶಯ ಹೇಳುತ, 

ಸುಖ, ಶಾಂತಿ, ನೆಮ್ಮದಿ ತಮ್ಮದಾಗಲೆಂದು ಹರಸುತ, 

ಸರ್ವೋದಯಕ್ಕೆ ಸಾರಥಿ ಆಗಲಿರುವ ನೂತನ ವರ್ಷಕ್ಕೆ ಸ್ವಾಗತ ಸುಸ್ವಾಗತ.......

- nagamani Kanaka

01 Jan 2024, 12:12 am
Download App from Playstore: