ಸಿಟ್ಟು
ನಿನ್ನ ನಿಯಂತ್ರಿಸುವ ರಹಸ್ಯ ರಟ್ಟ ಮಾಡುವೆಯಾ?
ನಿನ್ನ ಸಂಗದ ಗುಟ್ಟಾನಾದರೂ ಹೆಳುವೆಯಾ?
ನಿನ್ನ ಎಂಟೆದೆಯ ಧೈರ್ಯ ತೋರಿಸುವೆಯಾ?
ಶಾಂತಿಯನ್ನ ಅಶಾಂತಿಗೆ ತಳ್ಳಿರುವ ಸಿಟ್ಟೆ,,
ನಾನು ನಿನ್ನನ್ನೆ ಕೇಳುತಿರುವೆನು!!!!!!!!?
ಸ್ನೇಹವನ್ನೇ ಕೆಡಿಸಿರುವೆ!
ಸಂಬಂಧಗಳನ್ನೇ ಹಾಳು ಮಾಡಿರುವೆ!
ಬಂಧವನ್ನೇ ನಿರ್ಭಂಧಕ್ಕೆ ತಳ್ಳಿರುವೆ!
ಅನುಭಂಧದ ಛಾಯೆ ಅಳುಕಿಸಿರುವೆ!
ಹೇ ಸಿಟ್ಟೇ ನಾನು ನಿನಗೇ ಹೇಳುತಿರುವೆ!!!!!!??
ಅಲಾಅಲಾಲಾಲಾಲ ,ಮೂಗಿನ ಮೇಲಿರುವೆಯಲಾ?
ನೆತ್ತಿಗೆ ಬಂದು ಕೂತಿರುವೆಯಲಾ?
ಕಣ್ಣು ಕೆಂಪಾಗಾಗಿರಿಸಿರುವೆಯಲಾ?
ಹೇ ಸಿಟ್ಟೇ ನಿಂದೆ ಇದುಅಡ್ನಾಡಿ ಕೆಲಸ!!!!!!???
ಮೂಗಿನ ಮೇಲಿರು ಆದರೆ ಮೂಗು ಹಿಂಡಿಸಬೇಡ!
ನೆತ್ತಿಗೆ ಬಂದು ಕೂರು ಆದರೆ ಕುತ್ತಿಗೆ ಕೋಯಿಸಬೇಡ!
ಕಣ್ಣು ಕೆಂಪಾಗಾಗಿಸು ಆದರೆ ಮಣ್ಣು ಮುಕ್ಕಿಸಬೇಡ!
ಹೇ ಸಿಟ್ಟೇ,ಸಿಟ್ಟಾಗಿ ಸೇಟೆಸಿ ಸುಡಬೇಡ!!
ಗವಿಸಿದ್ಧನೆ ಸಿಟ್ಟಿನಿಂದಲೇ ಹೇಳುತಿರುವೆ, ಕೋನೆಯಾಗಿಸು!!!!!!!!!!!!!!!!!!!!
ಸುಗ್ಗಿ.....
- ಆರ್ ಎಸ್ ಸುಗ್ಗಿ.
30 Dec 2023, 08:22 pm
Download App from Playstore: