ಕವನ ಹಬ್ಬದ ವೈಭವ...

ಕವನ ಹಬ್ಬದ ವೈಭವ... ಹುದುಗಿದ್ದ ಬೆಳಕು ಇಳೆಗೆ ಇಣುಕಿದಾ ಕ್ಷಣ,
ಮನೆಯೊಳಗೆ ಮೋರೆಯುತ್ತಿತ್ತು ಮುದ್ದು ಕುವರಿಯ ಅಳುವಿನ ಪಠಣ.
ಹಬ್ಬದ ವೈಭವಕ್ಕೆ ಹೊಸ ಜೀವದ ಉಡುಗೊರೆಯ ಕೊಡುಗೆ, ,
ತನ್ನವರ ತಲ್ ಹಣ ಗೊಳಿಸುತ್ತಿತ್ತು ಚಂದದ ತೊದಲ ನುಡಿಯೊಳಗೆ.
ಹಳೇ ಬೇರು ತಮಗೆ ಕೊಟ್ಟ ಸಂಸ್ಕೃತಿಯ ಪಾಠ,
ತಾವು ಸರ್ವರನ್ನು ಅರ್ಥೈಸಿ ಬದುಕಲದು ಮುನ್ನೋಟ.
ಜೀವನದ ಪಯಣದಲ್ಲಿ ಹೆಣ್ಣಿಗುಂಟು ತೊಡರು,
ತಮ್ಮಂತೆ ಜಾಲಿಯ ಸರಿಸಿ ಬೆಳೆದರೆ ಹೊಲದಿ ಎಂಥ ಫೈರು!.
ಚಿಗುರುವ ಬಳ್ಳಿಗೆ ಚೈತನ್ಯವಾಗೊ ನಿಮ್ಮ ಆತ್ಮ ಸ್ಥೈರ್ಯ,
ನಮ್ಮ ಸ್ನೇಹಮಯ ಕಲಿಕೆಯಲ್ಲಿ ಮೆರೆಯುತ್ತಿದೆ ನಿಮ್ಮ ಔಧಾರಿಯ.
ಕೋಟಿ ರಾಶಿಯ ನಡುವೆ ಮಿಂಚೋ ನಿಮ್ಮ ಸರಳ ವ್ಯಕ್ತಿತ್ವ,
ಗರ್ವದಿ ಕೊಳೆಯುವ ಶಿಲೆಗು ಜೀವ ತುಂಬುವಂತಿಹುದು,
ನಿಮ್ಮ ಸಹೋದರತ್ವ.
ನಿಮ್ಮ ವಾತ್ಸಲ್ಯದ ಮಡಿಲಲ್ಲಿ ಅರಳಿದ ಮಕ್ಕಳೆಂತ ಧನ್ಯ,
ಎಲ್ಲರೆದೇ ಯಲ್ಲೂ ಮೂಡಲಿ ನಿಮ್ಮ ಮಾನವೀಯ ಮೌಲ್ಯ.
ಅದರ ನೆರವಲಿ ಬೆಳೆಯುವ ನಮಗೆ ದೊರೆಯಲಿ ಸಾಫಲ್ಯ.
ಜಗಕೆ ಬೇಳಕಾಗಿರೋ ನಿಮ್ಮ ಜನುಮ ದಿನಕ್ಕೆ,
ಅರ್ಪಿಸುವೆ ನನ್ನ ಪ್ರೀತಿಯ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳ ಮಾಲಿಕೆ.

- nagamani Kanaka

25 Dec 2023, 09:45 pm
Download App from Playstore: