*ನಕ್ಷತ್ರ ಪುಂಜ*
*ಗೆಳತಿ__
ಅಂದು ನೀನೊಲಿದು ನಕ್ಕಾಗ
ಸಾವಿರ ಮೊಂಬತ್ತಿಗಳ ಬೆಳಕಿನಂತೆ;
ಮನ ಬರೆದಿತ್ತು ಒಲವಿನ
ಕಥೆಯ,
ಇಂದು__
ನೀ ಮುನಿದು ದೂರ ಸರಿದಾಗ;
ಅದರ ವಿರಹಾಗ್ನಿ
ನಕ್ಷತ್ರ ಪುಂಜಗಳ
ಸುಡು ಬೆಂಕಿಯಂತೆ ದಹಿಸಿತ್ತು
ನನ್ನೆದೆಯ,
ಕೈಗೆ ಟುಕದ ನಕ್ಷತ್ರ ವಾಗದೆ
ಹಿತವಾದ ಮೊಂಬತ್ತಿಯ ಬೆಳಕಿನಂತೆ
ಬರಲಾರೆಯ ಗೆಳತಿ-
ನನ್ನೊಲವಿನ ಅರಮನೆಗೆ* ;
*ಸವಿತಾ ಕೋಮಾರ್*
- savita komar
24 Dec 2023, 01:16 pm
Download App from Playstore: