ಭಾಗ್ಯವಂತರು
ಭಾಗ್ಯವಂತರು ನಾವು ಭಾಗ್ಯವಂತರು
ಭಾಗ್ಯವಂತರು ನಾವು ಭಾಗ್ಯವಂತರು
ಬಾಲ್ಯವನ್ನು ಜೇನಿನಂತೆ ಸವಿದವರು ನಾವು
ಕನ್ನಡಾಂಬೆಗೆ ಕಿರೀಟ ಇಟ್ಟವರನ್ನು
ಕಂಡವರು ನಾವು
ದೇವರ ಪ್ರತಿರೂಪ ಕಂಡವರು ನಾವು
ಭಾಗ್ಯವಂತರು ನಾವು ಭಾಗ್ಯವಂತರು
ಬಾನಲ್ಲಿ ಎನ್ನಾವರು ಸಾಧಿಸಿದ ವಿಜಯವನ್ನು ಕಂಡವರು ನಾವು
ಆ ಬಾನಿಗೆ ಓಕುಳಿ ಹಚ್ಚುವ
ಕಬ್ಬಿಗನನ್ನು ಕಂಡವರು ನಾವು
ಭಾಗ್ಯವಂತರು ನಾವು ಭಾಗ್ಯವಂತರು
ಪ್ರಕೃತಿಯ ಒಡಲನ್ನು ವ್ಯನಜೀವಿಗಳನ್ನು
ಕಂಡವರು ನಾವು
ಆರೋಗ್ಯಕರ ಆಹಾರ ಕಂಡವರು ನಾವು
ಮೇಲಕ್ಕೆ ತಡವಾಗಿ ಹೋಗುವವರನ್ನು ಕಂಡವರು ನಾವು
ನಿಜವಾಗಿಯು ಭಾಗ್ಯವಂತರು
ನಾವೇ ಭಾಗ್ಯವಂತರು
ನಿಖಿಲ್ ಟಿ ಆರ್.
- Nikhil
19 Dec 2023, 08:18 am
Download App from Playstore: