ಜನಮರಳೋ.. ಜಾತ್ರೆ ಮರಳೋ .
ಜನ ಮರಳೋ ಜಾತ್ರೆ ಮರಳೋ*
ಈಗೀಗ ಅವನ ನೋಡಿ
ಇವನು ,ಇವನ ನೋಡಿ
ಅವರು ಮನೆಯಲ್ಲಿ ಶುದ್ದ
ನೀರು, ಎಳನೀರು ಉಚಿತವಾಗಿ
ಸಿಗುತ್ತಿದ್ದರೂ ದುಬಾರಿ ಹಣ ತೆತ್ತು
ಕುಡಿಯಲಾರಂಭಿಸಿದ್ದೇವೆ ಕೋಕ್
ಪೆಪ್ಸಿ, ಅದೂ.. ಇದು...
ಈಗೀಗ ಮನೆಯಲ್ಲಿ ಸಿರಿಧಾನ್ಯದ
ಆರೋಗ್ಯಕ್ಕೆ ಪೂರಕವಾದ ಆಹಾರ
ಲಭ್ಯವಿದ್ದರೂ ಹುಡುಕಿಕೊಂಡು
ಹೋಗಿ ತಿನ್ನುತ್ತಿರುವೆವು ಫಿಜಾ, ಬರ್ಗರ್, ಗೋಬಿ ಮಂಚೂರಿ ಅದೂ.. ಇದು....
ಈಗೀಗ ಸಾಂಪ್ರದಾಯಿಕ
ಉಡುಗೆಗಳನ್ನು ಕಡೆಗಣಿಸಿ
ಪ್ಯಾಶನ್ ಹೆಸರಲ್ಲಿ ಅರೆಬರೆ
ಬಟ್ಟೆಗಳನ್ನು ತೊಡುತ್ತಿಹೆವು
ಮಿಡಿ ,ಮ್ಯಾಕ್ಸಿ ಅದೂ... ಇದು...
ಮನೆಯಲ್ಲಿ ಬಳಸದೇ ಬಿದ್ದ
ನೂರಾರು ವಸ್ತುಗಳಿದ್ದರೂ
ಕೊಳ್ಳುಬಾಕತನದಿಂದ
ಖರೀದಿಸಲು ಅಲೆದಾಡುತ್ತಿರುವೆವು
ಎಡತಾಕುತ ,ಮಾಲ್ .ಮಾರ್ಟ್,
ಸೂಪರ್ ಬಜಾರ್ ಅದೂ.. ಇದು...
ಯಾರಿಗೂ ಚಿಂತನ ಮಂಥನ
ಮಾಡಲು ಪುರುಸೊತ್ತಿಲ್ಲ ಈಗೇನಿದ್ದರೂ
ಜನಮರಳೋ.. ಜಾತ್ರೆ ಮರಳೋ .
- Subhas Subhas
17 Dec 2023, 10:46 pm
Download App from Playstore: