ಬಣ್ಣದ ಲೋಕ

ನಂಬಿ ಬಂದವರಾರೋ
ನಟಿಸಿ ನಿಂತವರಾರೋ
ಬಣ್ಣ ಹಚ್ಚಿದವರಾರೋ
ಬವಣೆ ನೀಡಿದವರಾರೋ
ಮನಸ ಮೆಚ್ಚಿದವರಾರೋ
ಮನಸೇ ಇಲ್ಲದವರಾರೋ
ಪ್ರೀತಿ ನೀಡಿದವರಾರೋ
ಪ್ರೀತಿಸಿದಂತೆ ನಟಿಸಿದವರಾರೋ
ಇಲ್ಲಿ ಯೋಗ್ಯರಾರೋ
ಇಲ್ಲಿ ಅಯೋಗ್ಯರಾರೋ
ಬಣ್ಣದ ಲೋಕದಲ್ಲಿ,
ಬಣ್ಣದ ಲೋಕದಲ್ಲಿ,
ಬಣ್ಣದ ಮಾತುಗಳನಾಡಲರಿಯದೇ
ಭಾವುಕರಾಗಿ ಕಣ್ಣೀರ ಹರಿಸಿದವರಾರೋ
ನಿಷ್ಕಲ್ಮಶ ನಿಷ್ಠೆಯಿಂದ ವಂಚಿತರಾದವರಾರೋ

- Pareeni

15 Dec 2023, 01:23 pm
Download App from Playstore: