ನನ್ನಮ್ಮ ಶ್ರೇಷ್ಠದವಳು
ಅಮ್ಮ ಏನೆಂದು ಹೇಳಲಿ ನಿನ್ನ ಬಗ್ಗೆ
ನೀನು ಮಾಡಿರುವ ತ್ಯಾಗ ಒಂದಾ, ಎರಡಾ?
ನಿನ್ನ ತ್ಯಾಗಗಳು ಕಡಲಿನಷ್ಟು
ನಿನ್ನ ತ್ಯಾಗಗಳಿಗೆ ಯಾರು ಸಾಟಿನಮ್ಮ?
ಅಮ್ಮ ಹೆತ್ತವಳು ನೀನು, ಹೊತ್ತವಳು ನೀನು
ಪ್ರಶ್ನೆಗೂ ಪ್ರಶ್ನೆಯಾದವಳು ನೀನು.
ಉತ್ತರಕೂ ಸಿಗದ ಎತ್ತರಕ್ಕೂ ನಿಲುಕದ
ಅತ್ಯುತ್ತಮ ಗುಣದವಳು ನೀನು.
ಅಮ್ಮ ನಿನ್ನೊಂದು ಪ್ರೀತಿಯ ಮಡಿಲು
ಕರುಣೆ ತುಂಬಿರುವ ಕಡಲು.
ಕೊನೆ ಕಾಣದ ಕಡಲಂತೆ
ವಿಶಾಲವಾದ ಕಥೆ ನನ್ನಮ್ಮ.
-ಅಂಬಿಕಾ ಜಿ. ಕುಲಕರ್ಣಿ
- Ambika Kulkarni
27 Nov 2023, 03:43 pm
Download App from Playstore: