ಕವನ ಜ್ಞಾನದ ಬೆಳಕು



 ಶುಭೋದಯದಿ ಸ್ಪಟಿಕದಂತೆ ಪುಟಿಯುತ್ತಿದ್ದ ನಿಮ್ಮ ಧ್ವನಿ,ನಮ್ಮ ಮುಗುಳ್ನಗೆಯಲ್ಲಿ ಹೊಳೆಯುತ್ತಿದ್ದ ಬಂಗಾರದ ಹನಿ.

ನಮ್ಮ ಮನದ ಕಾರ್ಮೋಡ ಸರಿಸೊ ನಿಮ್ಮ ನುಡಿಯ ಆಕರ್ಷಣೆ,

ನಮ್ಮೊಳಗೆ ಹೆಚ್ಚಿಸಿದೆ ನಾವ್‌ ಛಲ ಬಿಡದೆ ನಿಭಾಯಿಸುವ ಜವಾಬ್ದಾರಿಗಳ ಹೊಣೆ.

ನಮ್ಮ ತರಬೇತಿಗೆ ನಿಮ್ಮ ಅನುಭೂತಿಯ ಪರಿಶ್ರಮ,ನಮಗೆ ಸ್ಪೂರ್ತಿಯಾಗಿದೆ ನೀವ್‌ ಸಂಯೋಜಿಸಿದ ಹಲವು ರೀತಿಯ ಕಾರ್ಯಕ್ರಮ.

ನಮ್ಮ ಹೃದಯದ ಬೆಳಕಾಗಿ ನೀಡಿದ ನಿಮ್ಮ ಮಾರ್ಗದರ್ಶನ,ಪೀಟಿಕೆಯಾಗಿ ಪ್ರಝ್ವಲಿಸುವುದು ನಮ್ಮ ಕರ್ತವ್ಯ ಜೀವನ.

ತರಬೇತಿಯ ಮರೆಯಲ್ಲಿ ನಮಗೆ ಖುಶಿ ತರುತ್ತಿದ್ದ ನಿಮ್ಮ ಕಾರ್ಯ ಯೋಜನೆ,ನಮ್ಮ ಶಿಸ್ತಿನ ಬದುಕಿಗೆ ಸೇತುವೆಯಾಗಿವೆ, ನಿಮ್ಮ ಸದ್ಗುಣಗಳ ಆರಾಧನೆ.

ಜ್ಞಾನದ ಜೊತೆಯಲ್ಲಿ ನಾವ್‌ ಪಡೆದೆವು ನಿಮ್ಮಲ್ಲಿ ಮಾತೃ ಮಮತೆಯ,ಸಮಾಜಕ್ಕೆ ಸಲ್ಲಿಸಬೇಕು ನಾವ್‌ ನಿಮ್ಮ ಸ್ಮರಣೆಯಲ್ಲಿ ಉತ್ತಮ ಸೇವೆಯ.

ಎಲ್ಲರೆದೆಯಲ್ಲಿ ಕ್ರಿಸ್ಟೀನರ ಜ್ಞಾನ ಕಾಂತಿ ಹರಿಯಲಿ,ನಮಗಾಗಿ ಸೃಶ್ಟಿಯಾಗಲಿ ನಿಮ್ಮಂತ ಅಧಿಕಾರಿಗಳು ನಮ್ಮ ಧರೆಯಲಿ.

- nagamani Kanaka

26 Nov 2023, 02:22 pm
Download App from Playstore: