ಜನ್ಮದಿನ
ರೆಕ್ಕೆ ಇರದ ಹಕ್ಕಿಗೆ ಜೊತೆಯಾದ ನೀವೇ ಕಾರ್ತಿಕ ಮಾಸದ ದೀಪ,
Z ಒಣಗಿದ ನನ್ನೆದೆ ಗೂಡಿಗೆ ನವ ಚಿಂತನೆಗಳನೆ ಸಗುವುದೇ ನಿಮ್ಮ ಸಂಕಲ್ಪ.
ಬಡಿದೆಬ್ಬಿಸುವ ನಿಮ್ಮ ಜೀವನದ ಅನುಭವದ ಸಾಲುಗಳು,
ನನ್ನ ಸಂಕೀರ್ಣ ಸಂಸಾರವ ಸಾಗಿಸಲು ಪ್ರಯೋಗಿಸುವ ವಿವೇಕ ಮಂತ್ರಗಳು.
ನೆನಪುಕುವ ಲತೆಗೆ ನಿಮ್ಮನ್ನು ಅಪ್ಪುವ ಬಯಕೆ,
ನೆರಳ ಕೊಡುವ ಮರ ಅರ್ಥವಾದರೂ, ತಿರಸ್ಕರಿಸಬಾರದು ಮರುಕ ಜೀವದ ಕೋರಿಕೆ.
ಕಣ್ಮುಚ್ಚು ಕೊನೆಯ ಉಸಿರು ನಿಮ್ಮ ಹೆಸರು ಕರೆಯುವಾಗ,
ಅಳಿಲಂತೆ ಪ್ರೀತಿಯ ಗುಟುಕ ನೀಡಬೇಕೆನಿಸದೆ ನಿಮ್ಮ ಹೃದಯಕ್ಕೀಗ..
ಕಿಡಿಗಳ ಕಡುನುಡಿಗೆ ಕುಗ್ಗದಿರಲಿ ಹೊಸ ಪ್ರಯತ್ನದ ಚಿಂತನ,
ಮಾಗಿದ ಸಿಹಿ ಹಣ್ಣಿಗೆ ಜನ ಆಕರ್ಷಿಸುವಂತಿರಲಿ ನಿಮ್ಮ ವೃತ್ತಿ ಜೀವನ.
ಸರ್ವರ ಸಮಾನತೆಗೆ ಬೆಳಕಾದ ನಿಮ್ಮ ಜನ್ಮ ದಿನ,
ಭಾರತೀಯರ ಸ್ವಾಭಿಮಾನದ ಬದುಕಿಗೆ ಸನ್ಮಾರ್ಗ ರಚನೆಗೊಂಡ ಕ್ಷಣ.
ನಕ್ಷತ್ರದಂತೆ ಧರೆಯನ್ನು ಧರಿಸಲು ಉದಯಿಸಿದ ನಿಮಗೆ,
ನನ್ನ ಪ್ರೀತಿಯ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳ,
ಮಲ್ಲಿಗೆ ಹಾರ ನಿಮ್ಮ ಕೊರಳಿಗೆ.
- nagamani Kanaka
26 Nov 2023, 01:56 pm
Download App from Playstore: