ಓ ಮನವೇ

ಓ ಮನವೇ ಹೇಳು...
ನೀನೇಕೆ ಹೀಗಾಗಿರುವೆ ?
ಏಕೆ ಇಷ್ಟೊಂದು ಪರಿತಪಿಸುತ್ತಿರುವೆ ?

ಓ ಮನವೇ ಹೇಳು...
ಈ ಪುಟ್ಟ ಜೀವಕ್ಕೇಕೆ ನೋವುಣಿಸುತ್ತಿರುವೆ ?
ಯಾವುದಕ್ಕಾಗಿ ಇಷ್ಟೊಂದು ಹೋರಾಟ?

ಓ ಮನವೇ ಕೇಳು...
ಬಿಟ್ಟು ಬಿಡು ಈ ತೊಳಲಾಟವ
ದೂರ ಮಾಡು ನೀ ದುಗುಡವ

ಓ ಮನವೇ ಕೇಳು...
ಯಾರಿಲ್ಲ ಇಲ್ಲಿ ನಿನ್ನಷ್ಟು ಬಲಶಾಲಿ
ಭರವಸೆಯೇ ನಿನ್ನ ಕನಸಿಗೆ ರುವಾರಿ

ಓ ಮನವೇ ಹೇಳು...
ಮತ್ತೆ ನೀ ಹುಡುಕಿ ತರುವೆಯ ಆ ನಗು
ಮುಖವ ನನಗಾಗಿ ?

- ವರ್ಷಿಣಿ

- Varshini Hebbar

24 Nov 2023, 03:03 pm
Download App from Playstore: